ADVERTISEMENT

`ಸ್ಪೆಲ್ಲಿಂಗ್ ಬೀ' ಸ್ಪರ್ಧೆ :ಆಕ್ಷೇಪ ಎತ್ತಿದ ತಜ್ಞರು

​ಪ್ರಜಾವಾಣಿ ವಾರ್ತೆ
Published 2 ಜೂನ್ 2013, 19:59 IST
Last Updated 2 ಜೂನ್ 2013, 19:59 IST

ನ್ಯೂಯಾರ್ಕ್ (ಪಿಟಿಐ): ಅಮೆರಿಕದ ಪ್ರತಿಷ್ಠಿತ `ನ್ಯಾಷನಲ್ ಸ್ಪೆಲ್ಲಿಂಗ್ ಬೀ' ಸ್ಪರ್ಧೆಯಲ್ಲಿ ಭಾರತೀಯ ಮೂಲದ ಅಮೆರಿಕದ 13 ವರ್ಷದ ವಿದ್ಯಾರ್ಥಿ ಅರವಿಂದ್ ಮಹಾನ್‌ಕಲಿ ಜರ್ಮನ್ ಮೂಲದ ‘Knaidel’ ಎಂಬ ಪದದ ಸ್ಪೆಲ್ಲಿಂಗ್ ಅನ್ನು ಸರಿಯಾಗಿ ಉಚ್ಚಾರಣೆ ಮಾಡುವ ಮೂಲಕ ಚಾಂಪಿಯನ್ ಆಗಿದ್ದು ಇದನ್ನು ಯೆಹೂದಿ ಮೂಲದ ಯಿದ್ದಿಷ್ ಭಾಷಾ ತಜ್ಞರೊಬ್ಬರು ಆಕ್ಷೇಪಿಸಿದ್ದಾರೆ.

ನ್ಯೂಯಾರ್ಕ್ ನಿವಾಸಿ ಅರವಿಂದ್ ‘Knaidel’ಎಂಬ ಪದಕ್ಕೆ ಚೆನ್ನಾಗಿ ನಾದಿದ (ಗಟ್ಟಿಸಿದ) ಹಿಟ್ಟಿನ ಸಣ್ಣ ಉಂಡೆ ಎಂಬ ಅರ್ಥವುಳ್ಳ ಈ ಪದದ ಸ್ಪೆಲ್ಲಿಂಗ್ ಅನ್ನು ಗುರುವಾರ ಸರಿಯಾಗಿ ಹೇಳುವ ಮೂಲಕ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡ. ಆದರೆ ಯಿದ್ದಿಷ್ ಭಾಷೆಯ ಮಾವೆನ್ಸ್ ಪ್ರಕಾರ, ಅರವಿಂದ್ ನೀಡಿದ ವಿವರಣೆಗೆ ಸರಿಯಾದ ಪದ ‘kneydl’ ಆಗಿದ್ದು ಐತಿಹಾಸಿಕವಾಗಿ ಇದೇ ಸರಿ ಎಂದು ನ್ಯೂಯಾರ್ಕ್ ಟೈಮ್ಸ ವರದಿ ಮಾಡಿದೆ.

ಮ್ಯಾನ್‌ಹಟನ್‌ನಲ್ಲಿರುವ ಯಿದ್ದಿಷ್ ಭಾಷಾ ಸಂಶೋಧನಾ ಕೇಂದ್ರದ ವಾಗ್ಮಿಗಳ ಅಭಿಪ್ರಾಯ ಉಲ್ಲೇಖಿಸಿ ಮಾವೆನ್ಸ್ ಈ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಯಿದ್ದಿಷ್ ತಜ್ಞರ ವಾದವನ್ನು ಒಪ್ಪದ ಸ್ಪರ್ಧೆಯ ಸಂಘಟಕರು ವೆಬ್‌ಸ್ಟರ್ಸ್‌ ಮೂರನೇ ಆವೃತ್ತಿಯ ಹೊಸ ಅಂತರರಾಷ್ಟ್ರೀಯ ಶಬ್ದಕೋಶವನ್ನು ತಾವು ಆಧಾರವಾಗಿಟ್ಟುಕೊಂಡಿದ್ದಾಗಿ `ಸ್ಪೆಲ್ಲಿಂಗ್ ಬೀ' ವಕ್ತಾರ ಕ್ರಿಸ್ ಕೆಂಪರ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.