ADVERTISEMENT

ಹುಣ್ಣಿಮೆ ಸಮಯದಲ್ಲಿ ಬೈಕ್ ಅಪಘಾತ ಹೆಚ್ಚಳ: ಅಧ್ಯಯನ

ಪಿಟಿಐ
Published 13 ಡಿಸೆಂಬರ್ 2017, 19:30 IST
Last Updated 13 ಡಿಸೆಂಬರ್ 2017, 19:30 IST
ಹುಣ್ಣಿಮೆ ಸಮಯದಲ್ಲಿ ಬೈಕ್ ಅಪಘಾತ ಹೆಚ್ಚಳ: ಅಧ್ಯಯನ
ಹುಣ್ಣಿಮೆ ಸಮಯದಲ್ಲಿ ಬೈಕ್ ಅಪಘಾತ ಹೆಚ್ಚಳ: ಅಧ್ಯಯನ   

ನ್ಯೂಯಾರ್ಕ್: ಹುಣ್ಣಿಮೆಯ ರಾತ್ರಿಯಂದು ಬೈಕ್ ಓಡಿಸುವುದು ಅಪಘಾತದ ಸಂಭಾವ್ಯತೆಯನ್ನು ಹೆಚ್ಚಿಸುತ್ತದೆ ಎಂದು ಕೆನಡಾದ ಟೊರಾಂಟೊ ವಿಶ್ವವಿದ್ಯಾಲಯ ಹಾಗೂ ಅಮೆರಿಕದ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯಗಳ ತಜ್ಞರು ನಡೆಸಿದ ಅಧ್ಯಯನ ವರದಿ ಅಭಿಪ್ರಾಯಪಟ್ಟಿದೆ.

ಜಗತ್ತಿನಾದ್ಯಂತ ಬೈಕ್ ಅಪಘಾತಗಳು ಸಾಮಾನ್ಯವಾಗಿವೆ. ಅಮೆರಿಕದಲ್ಲಿ ವರ್ಷಕ್ಕೆ ಸುಮಾರು 5,000 ಜನರು ಬೈಕ್ ಅಪಘಾತದಿಂದ ಸಾಯುತ್ತಿದ್ದಾರೆ. ಪ್ರತಿ ಏಳು ಮಂದಿ ಸಾವಿನ ಪೈಕಿ ಒಬ್ಬ ವ್ಯಕ್ತಿಯ ಸಾವು ರಸ್ತೆ ಅಪಘಾತದಿಂದ ಸಂಭವಿಸುತ್ತಿದೆ ಎಂದು ಸಂಶೋಧಕರು ಹೇಳಿದ್ದಾರೆ. 

’ಬೈಕ್ ಸವಾರನ ಗಮನ ಬೇರೆಡೆ ಹೋಗುವುದು ರಸ್ತೆ ಅಪಘಾತಕ್ಕೆ ಪ್ರಮುಖ ಕಾರಣ. ವರ್ಷದಲ್ಲಿ 12 ಬಾರಿ ಪೂರ್ಣ ಚಂದ್ರ ಕಾಣಿಸುತ್ತಾನೆ. ಈ ಅವಧಿಯಲ್ಲಿ (ಹುಣ್ಣಿಮೆಗೆ ಒಂದು ವಾರ ಮೊದಲು ಮತ್ತು ಒಂದು ವಾರ ನಂತರ) ಚಂದ್ರ ದೊಡ್ಡದಾಗಿ ಕಾಣಿಸುವುದರಿಂದ ಹೆಚ್ಚು ಬೆಳಕು ಇರುತ್ತದೆ. ಹೀಗಾಗಿ ಬೈಕ್ ಸವಾರರ ಗಮನ ಬೇರೆಡೆ ಹರಿಯುವ ಸಂಭವವಿರುತ್ತದೆ’ ಎಂದಿದ್ದಾರೆ.  ಹುಣ್ಣಿಮೆ ದಿನ ಸಂಭವಿಸಿದ ಅಪಘಾತಗಳ ದತ್ತಾಂಶ ಹಾಗೂ ಇತರ ದಿನ ನಡೆದ ಅಪಘಾತಗಳ ದತ್ತಾಂಶಗಳನ್ನು ಹೋಲಿಸಿ, ಈ ಅಭಿಪ್ರಾಯಕ್ಕೆ ಬರಲಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ.

ADVERTISEMENT

ಹುಣ್ಣಿಮೆ ರಾತ್ರಿಗಳಂದು ಜಾಗರೂಕತೆಯಿಂದ ಬೈಕ್ ಓಡಿಸುವುದು ಉತ್ತಮ ಎಂದು ವರದಿ ಸಲಹೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.