ಪಾಕಿಸ್ತಾನದ ಬಲೂಚಿಸ್ತಾನದಲ್ಲಿ ಸಂಭವಿಸಿದ ಭೂಕಂಪದ ನಂತರ ಗ್ವಾದರ್ ಬಂದರು ಸಮೀಪ ಅರಬ್ಬಿ ಸಮುದ್ರದಲ್ಲಿ ‘ದ್ವೀಪ’ವೊಂದು ಸೃಷ್ಟಿಯಾಗಿದೆ ಎಂದು ಪಾಕ್ ಮಾಧ್ಯಮಗಳು ತಿಳಿಸಿವೆ.
ಅಧಿಕಾರಿಗಳ ಪ್ರಕಾರ, ಈ ದ್ವೀಪ 200 ಮೀಟರ್ ಉದ್ದ, 20 ಮೀಟರ್ ಎತ್ತರ ಮತ್ತು 100 ಮೀಟರ್ ಅಗಲವಿದೆ ಎಂದು ‘ಡಾನ್’ ಪತ್ರಿಕೆ ವರದಿ ಮಾಡಿದೆ.
‘ಭೂಕಂಪ ಸಂಭವಿಸಿದ ತಕ್ಷಣ ಈ ದ್ವೀಪ ನಿರ್ಮಾಣವಾಗಿದೆ. ತೀರದಿಂದ 1.5 ಕಿ.ಮೀ ದೂರದಲ್ಲಿ ದ್ವೀಪ ಸೃಷ್ಟಿಯಾಗಿದೆ ಎಂದು ಗ್ವಾದರ್ಗೆ ತೆರಳಿರುವ ನಮ್ಮ ಸಿಬ್ಬಂದಿ ತಿಳಿಸಿದ್ದಾರೆ. ಅಲ್ಲಿ ನಿರ್ಮಾಣವಾಗಿರುವ ದ್ವೀಪವನ್ನು ವೈಜ್ಞಾನಿಕವಾಗಿ ಪರಿಶೀಲಿಸಬೇಕಾಗಿದೆ’ ಎಂದು ರಾಷ್ಟ್ರೀಯ ಸಾಗರೋತ್ತರ ಅಧ್ಯಯನ ಸಂಸ್ಥೆ ಪ್ರಾಂಶುಪಾಲ ಆಸೀಫ್ ಇನಾಮ್ ತಿಳಿಸಿದ್ದಾರೆ.
ಮಿಥೇನ್ ಅನಿಲ: ‘ಅರಬ್ಬಿ ಸಮುದ್ರದಲ್ಲಿ ನಿರ್ಮಾಣವಾಗಿರುವ ದ್ವೀಪವು ‘ಮಿಥೇನ್ ಅನಿಲ’ ಹೊರಸೂಸುತ್ತಿದ್ದು, ಅದರ ಸಮೀಪಕ್ಕೆ ಹೋಗದಂತೆ ತಜ್ಞರು ಸ್ಥಳೀಯರಲ್ಲಿ ಮನವಿ ಮಾಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.