ADVERTISEMENT

‘ಶಂಕಾಸ್ಪದ’ ವಸ್ತು ಕಂಡ ಚೀನಾ ವಿಮಾನ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2014, 9:52 IST
Last Updated 24 ಮಾರ್ಚ್ 2014, 9:52 IST

ಪರ್ತ್‌/ಬೀಜಿಂಗ್‌ (ಪಿಟಿಐ): ಚೀನಾದ ತನಿಖಾ ವಿಮಾನವು ಹಿಂದೂ ಮಹಾಸಾಗರದ ದಕ್ಷಿಣ ಭಾಗದಲ್ಲಿ  ಸೋಮವಾರ ‘ಶಂಕಾಸ್ಪದ’ ವಸ್ತುಗಳನ್ನು ಪತ್ತೆ ಮಾಡಿದ್ದು, ಈ ಬೆನ್ನಲ್ಲೇ ಕಾರ್ಯ ಪ್ರವೃತರಾಗಿರುವ ಮಲೇಷ್ಯಾ, ನಾಪತ್ತೆಯಾಗಿರುವ ವಿಮಾನಕ್ಕಾಗಿ 10 ವಿಮಾನಗಳೊಂದಿಗೆ ಶೋಧಕಾರ್ಯವನ್ನು ಮತ್ತಷ್ಟು ತೀವ್ರಗೊಳಿಸಿದೆ.

239 ಜನರೊಂದಿಗೆ ನಿಗೂಢವಾಗಿ  ಮಾರ್ಚ್‌ 8ರಂದು ಕಾಣೆಯಾದ ಮಲೇಷ್ಯಾ ವಿಮಾನದ ಶೋಧ ನಡೆಸುತ್ತಿರುವ ಚೀನಾದ ‘ಇಲ್ಯೂಶಿನ್‌ 76’ ವಿಮಾನವು ‘ಬಿಳಿ ಹಾಗೂ ಚಚ್ಚೌಕ’ ವಸ್ತುಗಳನ್ನು  ಪತ್ತೆ ಮಾಡಿದೆ.

ಕಳೆದ 17 ದಿನಗಳಿಂದ ಕಾಣೆಯಾಗಿರುವ ವಿಮಾನ ಶೋಧ ಕಾರ್ಯಾಚರಣೆಯಲ್ಲಿ ತೊಡಗಿರುವ ಇಲ್ಯೂಶಿನ್‌ಗೆ ‘ಕೆಲವು ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಹಲವು ಚಿಕ್ಕಪುಟ್ಟ ಚದುರಿದ ವಸ್ತುಗಳೊಂದಿಗೆ ಎರಡು ದೊಡ್ಡ ವಸ್ತುಗಳು ಕಂಡಿವೆ’ ಎಂದು ಸುದ್ದಿ ಸಂಸ್ಥೆ ಕ್ಸಿನ್ಹುವಾ ವರದಿ ಮಾಡಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.