ADVERTISEMENT

ಬಾಂಗ್ಲಾದೇಶ: ಮಸೀದಿಯಲ್ಲಿ ದಾಳಿ; 12 ಮಂದಿಗೆ ಗಾಯ

ಪಿಟಿಐ
Published 10 ಏಪ್ರಿಲ್ 2021, 10:13 IST
Last Updated 10 ಏಪ್ರಿಲ್ 2021, 10:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಢಾಕಾ: ‘ಬಾಂಗ್ಲಾದೇಶದಉತ್ತರ ಭಾಗದ ಮಸೀ‌ದಿಯೊಂದರಲ್ಲಿ ಇಸ್ಲಾಮಿಕ್‌ ಗುಂಪೊಂದು ದಾಳಿ ನಡೆಸಿದ್ದು, ಈ ಘಟನೆಯಲ್ಲಿ 12 ಮಂದಿಗೆ ಗಾಯಗಳಾಗಿವೆ’ ಎಂದು ಮಾಧ್ಯಮವೊಂದು ವರದಿ ಮಾಡಿದೆ.

‘ಗೈಬಂಧ ಜಿಲ್ಲೆಯ ಮಸೀದಿಯಲ್ಲಿ ಶುಕ್ರವಾರ ಈ ಘಟನೆ ನಡೆದಿದ್ದು, ಸ್ವಯಂ ಘೋಷಿತ ಹಿಫಾಜತ್-ಎ-ಇಸ್ಲಾಂ ಸಂಘಟನೆಯ ಕಾರ್ಯಕರ್ತರು ಧರ್ಮಗುರು (ಇಮಾಮ್‌) ಅವರ ಕೈಯಿಂದ ಮೈಕ್‌ ಕಿತ್ತುಕೊಂಡು, ತಮ್ಮ ಸಂಘಟನೆಯ ಬಗ್ಗೆ ಹೇಳಲು ಆರಂಭಿಸಿದ್ದಾರೆ. ಅವರನ್ನುತಡೆಯಲು ಬಂದ ಭಕ್ತರ ಮೇಲೆಕಾರ್ಯಕರ್ತರು ದಾಳಿ ನಡೆಸಿದ್ದಾರೆ ’ ಎಂದು ಢಾಕಾ ಟ್ರಿಬ್ಯೂನ್‌ ವರದಿ ಮಾಡಿದೆ.

‘ಈ ಸಂಬಂಧ ಸುಂದರ್‌ಗಂಜ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸಂಘಟನೆಯು ಮಸೀದಿ ಸಮಿತಿಯ ಬಗ್ಗೆ ಭಿನ್ನಾಭಿಪ್ರಾಯವನ್ನು ಹೊಂದಿದೆ. ಇದೇ ದಾಳಿಗೆ ಕಾರಣವಾಗಿರಬಹುದು’ ಎಂದು ಪೊಲೀಸ್‌ ಅಧಿಕಾರಿ ಬುಲ್‌ಬುಲ್‌ ಇಸ್ಲಾಂ ತಿಳಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.