ADVERTISEMENT

ಬಾಂಗ್ಲಾದೇಶದ ರಾಜಧಾನಿ ಢಾಕಾದ ಏಳಂತಸ್ತಿನ ಕಟ್ಟಡದಲ್ಲಿ ಭಾರೀ ಸ್ಫೋಟ: 14 ಜನ ಸಾವು

ಪಿಟಿಐ
Published 7 ಮಾರ್ಚ್ 2023, 14:21 IST
Last Updated 7 ಮಾರ್ಚ್ 2023, 14:21 IST
ಘಟನಾ ಸ್ಥಳ– ಚಿತ್ರ ಪಿಟಿಐ
ಘಟನಾ ಸ್ಥಳ– ಚಿತ್ರ ಪಿಟಿಐ   

ಢಾಕಾ: ಬಾಂಗ್ಲಾದೇಶದ ರಾಜಧಾನಿ ಢಾಕಾದ ಗುಲಿಸ್ತಾನ ಸಿದ್ಧಿಕಿ ಬಜಾರ್ ಎಂಬ ಜನನಿಬಿಡ ಪ್ರದೇಶದ ಏಳಂತಸ್ತಿನ ಕಟ್ಟಡವೊಂದರಲ್ಲಿ ಮಂಗಳವಾರ ಸಂಜೆ 4–50 ಗಂಟೆಗೆ ಭಾರಿ ಪ್ರಮಾಣದ ಸ್ಫೋಟ ಸಂಭವಿಸಿದೆ

ಸ್ಫೋಟದ ತೀವ್ರತೆಗೆ 14 ಜನ ಸ್ಥಳದಲ್ಲಿಯೇ ಮೃತಪಟ್ಟಿದ್ದು, ನೂರಾರು ಜನ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಢಾಕಾದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸ್ಫೋಟ ದ ತೀವ್ರತೆಗೆ ಸಾವು ನೋವಿನ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ಸ್ಥಳದಲ್ಲಿ ಬಾಂಬ್ ನಿಷ್ಕ್ರೀಯ ತಂಡ ಹಾಗೂ ಪರಿಹಾರ ಕಾರ್ಯಾಚರಣೆ ತಂಡ ಬೀಡು ಬಿಟ್ಟಿದೆ ಎಂದು ಢಾಕಾ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಸ್ಫೋಟಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಕಟ್ಟಡದ ನೆಲಮಹಡಿಯಲ್ಲಿ ಇನ್ನೂ ಹಲವಾರು ಜನ ಸಿಲುಕಿಕೊಂಡಿರಬಹುದು. ಅವರ ರಕ್ಷಣೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.