ADVERTISEMENT

ಬಾಲಕಿ ಸಾವು: ತನಿಖೆಗೆ ಒತ್ತಾಯ

ಅಮೆರಿಕ– ಮೆಕ್ಸಿಕೊ ಗಡಿಯಲ್ಲಿ ನಡೆದ ಹತ್ಯೆ

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 19:10 IST
Last Updated 19 ಜೂನ್ 2019, 19:10 IST
   

ವಾಷಿಂಗ್ಟನ್‌: ಅಮೆರಿಕ– ಮೆಕ್ಸಿಕೊ ಗಡಿ ಪ್ರದೇಶದಲ್ಲಿ ಭಾರತದ 6 ವರ್ಷದ ಬಾಲಕಿ ಗುರ್‌ಪ್ರೀತ್ ಕೌರ್‌ ಮೃತಪಟ್ಟ ಕುರಿತು ತನಿಖೆ ನಡೆಸಬೇಕು ಎಂದು ದಕ್ಷಿಣ ಏಷ್ಯಾ ರಾಷ್ಟ್ರಗಳು ಒತ್ತಾಯಿಸಿವೆ.

ಅಮೆರಿಕವನ್ನು ಪ್ರವೇಶಿಸುವ ವಲಸಿಗರನ್ನು ತಡೆಯುತ್ತಿರುವುದು ಹಾಗೂ ಗಡಿ ಪ್ರದೇಶದಲ್ಲಿ ಹೆಚ್ಚು ಸೈನಿಕರನ್ನು ನಿಯೋಜಿಸಿರುವುದು ಅಮಾನವೀಯ ವಾತಾವರಣ ಸೃಷ್ಟಿಸಿದೆ ಎಂದು ಅದು ಹೇಳಿದೆ.

ಬಾಲಕಿಯ ಸಾವು, ಬಾಲಕಿಯ ತಾಯಿ ಮತ್ತು ಇತರ ವಲಸಿಗರು ಕಾಣೆಯಾಗಿರುವ ಕುರಿತು ತನಿಖೆ ನಡೆಸಬೇಕು ಎಂದು ಕೋರಿ ಈ ವಾರ ಸುಂಕ ಮತ್ತು ಗಡಿ ರಕ್ಷಣೆ ಆಯುಕ್ತ ಕೆವಿನ್‌ ಕೆ. ಮ್ಯಾಕ್ಲಿಲನನ್‌ ಅವರಿಗೆ ಪತ್ರ ಬರೆಯುವುದಾಗಿ ದಕ್ಷಿಣ ಏಷ್ಯಾ ರಾಷ್ಟ್ರಗಳು ಹೇಳಿವೆ.

ADVERTISEMENT

ಇದು ಹೃದಯ ವಿದ್ರಾವಕ ಘಟನೆ ಎಂದು ಭಾರತ ಅಮೆರಿಕ ವಕೀಲ ರವಿ ಭತ್ರ ಹೇಳಿದ್ದಾರೆ.

ತಾಪಮಾನ 42 ಡಿಗ್ರಿ ಸೆಲ್ಸಿಯಸ್ ತಲುಪಿದ್ದ ವೇಳೆ ಬಾಲಕಿ ಮೃತಪಟ್ಟಿದ್ದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.