ADVERTISEMENT

ಐರ್ಲೆಂಡ್‌ನಲ್ಲಿ ಔಡಿ ಎ6 ಕಾರು ಅಪಘಾತ: ಇಬ್ಬರು ಭಾರತೀಯ ವಿದ್ಯಾರ್ಥಿಗಳ ದುರ್ಮರಣ

ಪಿಟಿಐ
Published 4 ಫೆಬ್ರುವರಿ 2025, 7:48 IST
Last Updated 4 ಫೆಬ್ರುವರಿ 2025, 7:48 IST
<div class="paragraphs"><p>ಸಾವು</p></div>

ಸಾವು

   

(ಪ್ರಾತಿನಿಧಿಕ ಚಿತ್ರ)

ಲಂಡನ್: ಐರ್ಲೆಂಡ್‌ನಲ್ಲಿ ಕಳೆದ ಜ.31ರಂದು ರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ 20 ವರ್ಷದ ಇಬ್ಬರು ಭಾರತೀಯ ವಿದ್ಯಾರ್ಥಿಗಳು ಮೃತರಾಗಿದ್ದಾರೆ. ಇನ್ನಿಬ್ಬರು ಭಾರತೀಯ ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ.

ADVERTISEMENT

ದಕ್ಷಿಣ ಐರ್ಲೆಂಡ್‌ನ ಕಾರ್ಲೊ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದೆ. ಮೃತರನ್ನು ತೆಲಂಗಾಣ ಮೂಲದ ಚೇರೆಕುರಿ ಸುರೇಶ್ ಚೌಧರಿ ಹಾಗೂ ಚಿತ್ತೂರಿ ಭಾರ್ಗವ್ ಎಂದು ಗುರುತಿಸಲಾಗಿದೆ.

ಈ ಯುವಕರು ಔಡಿ ಎ6 ಕಾರಿನಲ್ಲಿ ಕಾರ್ಲೊ ಸಿಟಿಯತ್ತ ತೆರಳುತ್ತಿದ್ದರು. Graiguenaspiddoge ಎಂಬಲ್ಲಿ ಕಾರು ಮರಕ್ಕೆ ಡಿಕ್ಕಿಯಾಗಿ ಅವಘಡ ಸಂಭವಿಸಿದೆ. ಗಾಯಗೊಂಡವರಲ್ಲಿ 20 ವರ್ಷದ ವಿದ್ಯಾರ್ಥಿನಿ ಹಾಗೂ ವಿದ್ಯಾರ್ಥಿ ಇದ್ದಾರೆ ಎಂದು ಎಂದು ಕಾರ್ಲೊ ಪೊಲೀಸರು ತಿಳಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವಿದ್ಯಾರ್ಥಿಗಳು ಕಾರ್ಲೊದ South East Technological University (SETU)ಯಲ್ಲಿ ಓದುತ್ತಿದ್ದರು ಎಂದು ಹೇಳಿದ್ದಾರೆ.

ಸಂತ್ರಸ್ತರಿಗೆ ಐರ್ಲೆಂಡ್‌ನಲ್ಲಿನ ಭಾರತೀಯ ರಾಯಭಾರ ಕಚೇರಿ ಸಂತಾಪ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.