ADVERTISEMENT

ಆಸ್ಟ್ರೇಲಿಯಾಕ್ಕೂ ವ್ಯಾಪಿಸಿದ ಓಮಿಕ್ರಾನ್‌

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2021, 10:08 IST
Last Updated 28 ನವೆಂಬರ್ 2021, 10:08 IST
ಆಸ್ಟ್ರೇಲಿಯಾದ ವಿಮಾನನಿಲ್ದಾಣವೊಂದರ ಚಿತ್ರ
ಆಸ್ಟ್ರೇಲಿಯಾದ ವಿಮಾನನಿಲ್ದಾಣವೊಂದರ ಚಿತ್ರ    

ನ್ಯೂ ಸೌತ್‌ ವೇಲ್ಸ್‌ (ಆಸ್ಟ್ರೇಲಿಯಾ): ಕೊರೊನಾ ವೈರಸ್‌ನ ಹೊಸ ರೂಪಾಂತರ ತಳಿ ಓಮಿಕ್ರಾನ್‌ನ ಎರಡು ಸೋಂಕು ಪ್ರಕರಣಗಳು ಈಗ ಆಸ್ಟ್ರೇಲಿಯಾದಲ್ಲೂ ಪತ್ತೆಯಾಗಿವೆ.

ನ್ಯೂ ಸೌತ್‌ ವೇಲ್ಸ್‌ನ ಆರೋಗ್ಯ ಆಧಿಕಾರಿಗಳು ಸಾಗರೋತ್ತರ ಪ್ರಯಾಣಿಕರ ತುರ್ತು ತಪಾಸಣೆ ನಡೆಸಿದ ನಂತರ ಪ್ರಕರಣಗಳು ದೃಢವಾಗಿವೆ.

ಕೊರೊನಾ ವೈರಸ್‌ನ ರೂಪಾಂತರ ತಳಿಯಾಗಿರುವ ಓಮಿಕ್ರಾನ್‌ ಮೊದಲಬಾರಿಗೆ ಹೊಮ್ಮಿದ್ದು ದಕ್ಷಿಣ ಆಫ್ರಿಕಾದ ಬೋಟ್ಸ್‌ವಾನಾದಲ್ಲಿ. ಸದ್ಯ ಇದು ಹಾಂಕಾಂಗ್‌, ಬ್ರಿಟನ್‌, ಜರ್ಮನಿಗಳಲ್ಲಿ ಕಾಣಸಿಕೊಂಡಿದೆ.

ADVERTISEMENT

ಭಾನುವಾರ ಆಫ್ರಿಕಾದಿಂದ ಸಿಡ್ನಿಗೆ ಬಂದ 14 ಮಂದಿಯ ತಪಾಸಣೆ ನಡೆಸಲಾಯಿತು. ಅದರಲ್ಲಿ ಇಬ್ಬರಿಗೆ ಕೋವಿಡ್‌ ಪಾಸಿಟಿವ್‌ ಇರುವುದು ಗೊತ್ತಾಗಿದೆ. ಅವರಲ್ಲಿ ಪತ್ತೆಯಾದ ಕೊರೊನಾ ವೈರಸ್‌ನ ವಂಶವಾಹಿ ಅಧ್ಯಯನವನ್ನು ಕೂಡಲೇ ನಡೆಸಲಾಯಿತು ಎಂದು ಸುದ್ದಿ ವಾಹಿನಿಗಳು ವರದಿ ಮಾಡಿವೆ.

ಸೋಂಕು ಪತ್ತೆಯಾದ ಇಬ್ಬರೂ ಲಕ್ಷಣ ರಹಿತರಾಗಿದ್ದು, ಅವರನ್ನು ಕ್ವಾರಂಟೈನ್‌ ಮಾಡಲಾಗಿದೆ ಎಂದೂ ಅಧಿಕಾರಿಗಳು ತಿಳಿಸಿದ್ದಾರೆ. ಅವರ ಸಂಪರ್ಕಕ್ಕೆ ಬಂದಿದ್ದ ಪ್ರಯಾಣಿಕರನ್ನೂ ಪ್ರತ್ಯೇಕಗೊಳಿಸಲಾಗಿದೆ.

ಓಮಿಕ್ರಾನ್‌ ವೈರಸ್‌ ಅತ್ಯಂತ ವೇಗವಾಗಿ ಪ್ರಸರಣೆ ಹೊಂದುವ ಸಾಮರ್ಥ್ಯವುಳ್ಳದ್ದಾಗಿದ್ದು, ಆತಂಕಕಾರಿ ಎನಿಸಿಕೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.