ADVERTISEMENT

ಅಮೆರಿಕದಲ್ಲಿ ದೋಣಿ ಕಣ್ಮರೆ: 20 ಸಾವು

ಏಜೆನ್ಸೀಸ್
Published 3 ಜನವರಿ 2021, 1:48 IST
Last Updated 3 ಜನವರಿ 2021, 1:48 IST
ಸಾಂಕೇತಿಕ ಚಿತ್ರ (ಎಎಫ್‌ಪಿ)
ಸಾಂಕೇತಿಕ ಚಿತ್ರ (ಎಎಫ್‌ಪಿ)   

ವಾಷಿಂಗ್ಟನ್‌: ಅಮೆರಿಕದಲ್ಲಿ ದೋಣಿಯೊಂದು ಕಣ್ಮರೆಯಾಗಿ 20 ಜನರು ಮೃತಪಟ್ಟಿದ್ದಾರೆಎಂದು ಅಮೆರಿಕ ಶನಿವಾರಪ್ರಕಟಿಸಿದೆ.

ಕಳೆದ ಭಾನುವಾರ ಪ್ಲೋರಿಡಾ ಕರಾವಳಿ ತೀರದಿಂದ ಬಹಮಾಸ್‌ ಕಡೆಗೆ ದೋಣಿ ಪ್ರಯಾಣ ಬೆಳೆಸಿತ್ತು. ದೋಣಿಯಲ್ಲಿ 20 ಜನರು ಇದ್ದರು. ಆದರೆ ದೋಣಿ ಹೊರಟ ಸ್ಥಳದಿಂದ 130 ಕೀ. ಮೀಟರ್‌ದಲ್ಲಿ ಕಣ್ಣರೆಯಾಗಿತ್ತು ಎಂದು ಅಮೆರಿಕದ ನೌಕ ಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ದೋಣಿ ಪತ್ತೆಗೆ ನೌಕಪಡೆ 44,000 ಚ. ಕಿ.ಮೀಟರ್ ವ್ಯಾಪ್ತಿಯಲ್ಲಿ ವೈಮಾನಿಕ ಕಾರ್ಯಾಚರಣೆ ನಡೆಸಿತ್ತು. ಆದರೆ ದೋಣಿ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶನಿವಾರ ದೋಣಿ ಪತ್ತೆ ಕಾರ್ಯಾ ನಡೆಸುವುದನ್ನು ಸ್ಥಗಿತಗೊಳಿಸಲಾಗಿದೆ.

ADVERTISEMENT

ದೋಣಿ ಕಣ್ಮರೆಯಾಗಿದ್ದು ಅದರಲ್ಲಿ ಇದ್ದ 20 ಜನರು ಮೃತಪಟ್ಟಿದ್ದಾರೆ ಎಂದು ನೌಕಾಪಡೆ ಅಧಿಕಾರಿಗಳು ಘೋಷಣೆ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.