ADVERTISEMENT

ಚೀನಾದ ಕಲ್ಲಿದ್ದಲು ಗಣಿಯಲ್ಲಿ ಪ್ರವಾಹ: ಮುಂದುವರಿದ ರಕ್ಷಣಾ ಕಾರ್ಯಾಚರಣೆ

ಏಜೆನ್ಸೀಸ್
Published 11 ಏಪ್ರಿಲ್ 2021, 6:26 IST
Last Updated 11 ಏಪ್ರಿಲ್ 2021, 6:26 IST
ಚೀನಾದ ಹುಟುಬಿ ಕೌಂಟಿಯ ಕಲ್ಲಿದ್ದಲು ಗಣಿಯ ಸುರಂಗದಲ್ಲಿ ಸಂಭವಿಸಿದ ಪ್ರವಾಹದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ         –ಎಪಿ/ಪಿಟಿಐ ಚಿತ್ರ
ಚೀನಾದ ಹುಟುಬಿ ಕೌಂಟಿಯ ಕಲ್ಲಿದ್ದಲು ಗಣಿಯ ಸುರಂಗದಲ್ಲಿ ಸಂಭವಿಸಿದ ಪ್ರವಾಹದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ         –ಎಪಿ/ಪಿಟಿಐ ಚಿತ್ರ   

ಬಿಜೀಂಗ್‌: ‘ಚೀನಾದ ಹುಟುಬಿ ಕೌಂಟಿಯ ಕಲ್ಲಿದ್ದಲು ಗಣಿಯ ಸುರಂಗದಲ್ಲಿ ಸಂಭವಿಸಿದ ಪ್ರವಾಹದಲ್ಲಿ 21 ಕಾರ್ಮಿಕರು ಸಿಲುಕಿದ್ದು, ಭಾನುವಾರವೂ ಅವರ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ’ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

‘ಕ್ಸಿನ್‌ಜಿಯಾಂಗ್ ಪ್ರದೇಶದ ಹುಟುಬಿ ಕೌಂಟಿಯ ಕಲ್ಲಿದ್ದಲು ಗಣಿಯಲ್ಲಿ ಶನಿವಾರ ಸಂಜೆ 6.10ಕ್ಕೆ ಪ್ರವಾಹ ಸಂಭವಿಸಿದೆ. ಈಗಾಗಲೇ ಅಲ್ಲಿಂದ 8 ಮಂದಿಯನ್ನು ರಕ್ಷಿಸಲಾಗಿದೆ’ ಎಂದು ವರದಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT