ADVERTISEMENT

24 ಭಿಕ್ಷುಕರನ್ನು ವಾಪಸ್ ಕಳಿಸಿದ ನೇಪಾಳ

ಪಿಟಿಐ
Published 9 ಆಗಸ್ಟ್ 2023, 14:02 IST
Last Updated 9 ಆಗಸ್ಟ್ 2023, 14:02 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕಠ್ಮಂಡು: ನಕಲಿ ದಾಖಲೆ ಹೊಂದಿದ್ದ, ನೈಸರ್ಗಿಕ ವಿಕೋಪಕ್ಕೆ ಸಿಲುಕಿ ಸಂಕಷ್ಟಕ್ಕೀಡಾಗಿದ್ದವರಂತೆ ವರ್ತಿಸುತ್ತಿದ್ದ ಅಪ್ರಾಪ್ತ ವಯಸ್ಸಿನ 12 ಮಂದಿ ಸೇರಿದಂತೆ 24 ಭಿಕ್ಷುಕರನ್ನು ಬಂಧಿಸಿದ ನೇಪಾಳ ಪೊಲೀಸರು, ಭಾರತಕ್ಕೆ ವಾಪಸ್ ಕಳಿಸಿದ್ದಾರೆ.

ರಾಜಸ್ಥಾನದ ಇವರೆಲ್ಲರೂ ಇಂಡೋ–ನೇಪಾಳ ಗಡಿಯಲ್ಲಿರುವ ಬಿರ್ತಾಮೋಡ್ ನಗರದ ಬೀದಿಗಳಲ್ಲಿ ಭಿಕ್ಷೆ ಬೇಡುತ್ತಿದ್ದರು ಎಂದು ತಿಳಿಸಿದ್ದಾರೆ. ನೇಪಾಳದಲ್ಲಿನ ಹಬ್ಬದ ದಿನಗಳಲ್ಲಿ ಗಡಿ ದಾಟಿ ಭಿಕ್ಷೆ ಬೇಡಲು ಬರುತ್ತಿರುವವರ ಸಂಖ್ಯೆ ಈಚೆಗೆ ಹೆಚ್ಚಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT