ಐಸ್ಟಾಕ್ ಚಿತ್ರ
ವಾಷಿಂಗ್ಟನ್: ಮದುವೆಗಾಗಿ ಅಮೆರಿಕದ ನ್ಯೂಜೆರ್ಸಿಗೆ ಆಗಮಿಸಿದ್ದ 24 ವರ್ಷದ ಭಾರತೀಯ ಯುವತಿ ನಾಪತ್ತೆಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನ್ಯೂಯಾರ್ಕ್ ಪೋಸ್ಟ್ ಪ್ರಕಾರ, ಸಿಮ್ರಾನ್ ಎಂದು ಗುರುತಿಸಲಾದ ಯುವತಿ ಜೂನ್ 20ರಂದು ಭಾರತದಿಂದ ಬಂದಿದ್ದರು. ಕಣ್ಗಾವಲು ದೃಶ್ಯಗಳಲ್ಲಿ ಮಹಿಳೆ ತನ್ನ ಫೋನ್ ನೋಡುತ್ತಾ ಯಾರಿಗೋ ಕಾಯುತ್ತಿರುವಂತೆ ಕಾಣುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಕೆಯ ನಾಪತ್ತೆಯ ಬಗ್ಗೆ ಮೊದಲು ಮಾಹಿತಿ ಬಂದ ಬಳಿಕ ಪರಿಶೀಲಿಸಿರುವ ಪೊಲೀಸರು, ಕಣ್ಗಾವಲು ವಿಡಿಯೊದಲ್ಲಿ ಆಕೆ ತೊಂದರೆಯಲ್ಲಿ ಇದ್ದಂತೆ ಕಾಣುತ್ತಿಲ್ಲ ಎಂದು ಹೇಳಿದ್ದಾರೆ.
ಮದುವೆ ಕಾರಣ ನೀಡಿ ಆಕೆ ಇಲ್ಲಿಗೆ ಬಂದಿದ್ದಾಳೆ ಎಂದು ತನಿಖಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಆದರೂ, ಆಕೆಗೆ ಮದುವೆಯಾಗುವ ಉದ್ದೇಶವಿದ್ದಂತಿಲ್ಲ. ಅಮೆರಿಕಕ್ಕೆ ಪ್ರವಾಸ ಮಾಡಲು ಹೀಗೆ ಮಾಡಿರಬಹುದು ಎಂದೂ ಅವರು ಹೇಳಿದ್ದಾರೆ.
ಸುಮಾರು 5 ಅಡಿ 4 ಇಂಚು ಎತ್ತರವಿರುವ ಸಿಮ್ರಾನ್. ಸುಮಾರು 68 ಕೆ.ಜಿ ತೂಕವಿರಬಹುದು ಎಂದು ಹೇಳಲಾಗುತ್ತಿದೆ. ಆಕೆಯ ಹಣೆಯ ಎಡಭಾಗದಲ್ಲಿ ಸಣ್ಣ ಗಾಯದ ಗುರುತು ಇದೆ.
ಕೊನೆಯ ಬಾರಿಗೆ ಆಕೆ ಕಂಡಾಗ ಬೂದು ಬಣ್ಣದ ಸ್ವೆಟ್‌ಪ್ಯಾಂಟ್, ಬಿಳಿ ಟಿ ಶರ್ಟ್ ಮತ್ತು ಸಣ್ಣ ವಜ್ರ ಖಚಿತ ಕಿವಿಯೋಲೆಗಳನ್ನು ಧರಿಸಿದ್ದಳು. ಆಕೆಗೆ ಅಮೆರಿಕದಲ್ಲಿ ಸಂಬಂಧಿಕರಿಲ್ಲ. ಇಂಗ್ಲಿಷ್ ಮಾತನಾಡಲು ಬರುತ್ತಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ವರದಿಯ ಪ್ರಕಾರ, ಭಾರತದಲ್ಲಿರುವ ಆಕೆಯ ಸಂಬಂಧಿಕರನ್ನು ಸಂಪರ್ಕಿಸಲು ಪೊಲೀಸರಿಗೆ ಸಾಧ್ಯವಾಗಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.