ADVERTISEMENT

ಭಾರತಕ್ಕೆ ರಾಣಾ ಹಸ್ತಾಂತರ: ಬೈಡನ್‌ ಆಡಳಿತ ಸಮ್ಮತಿ

ಮುಂಬೈ ಮೇಲೆ ದಾಳಿ ಪ್ರಕರಣ

ಪಿಟಿಐ
Published 20 ಜುಲೈ 2021, 7:42 IST
Last Updated 20 ಜುಲೈ 2021, 7:42 IST
ರಾಣಾ
ರಾಣಾ   

ವಾಷಿಂಗ್ಟನ್‌: 2008ರ ಮುಂಬೈ ಮೇಲಿನ ಉಗ್ರರ ದಾಳಿ ಪ್ರಕರಣದ ಆರೋಪಿ, ಪಾಕಿಸ್ತಾನ ಮೂಲದ ಕೆನಡಾ ಉದ್ಯಮಿ ತನಾವ್ಟುರ್‌ ರಾಣಾನನ್ನು ಭಾರತಕ್ಕೆ ಹಸ್ತಾಂತರಿಸಲು ಅಮೆರಿಕದ ಅಧ್ಯಕ್ಷ ಜೋ ಬೈಡನ್‌ ಆಡಳಿತ ಒಪ್ಪಿಗೆ ನೀಡಿದೆ.

ರಾಣಾ ಹಸ್ತಾಂತರ ಕುರಿತ ಅರ್ಜಿಯ ವಿಚಾರಣೆ ನಡೆಸುತ್ತಿರುವ ಲಾಸ್‌ಏಂಜಲೀಸ್‌ನ ಕೋರ್ಟ್‌ಗೆ ಈ ಮಾಹಿತಿ ನೀಡಲಾಗಿದೆ.

‘ರಾಣಾ ಹಸ್ತಾಂತರ ಕೋರಿ ಅರ್ಜಿ ಸಲ್ಲಿಸಿರುವ ಭಾರತ, ಆತನ ವಿರುದ್ಧದ ಆರೋಪಗಳಿಗೆ ಸಂಬಂಧಿಸಿ ಸಾಕಷ್ಟು ಸಾಕ್ಷ್ಯಗಳನ್ನು ಒದಗಿಸಿದೆ’ ಎಂದು ಕ್ಯಾಲಿಫೋರ್ನಿಯಾ ಸೆಂಟ್ರಲ್‌ ಡಿಸ್ಟ್ರಿಕ್ಟ್‌ ಆಡಳಿತವು ಕೋರ್ಟ್‌ಗೆ ಮಾಹಿತಿ ನೀಡಿದೆ.

ADVERTISEMENT

59 ವರ್ಷದ ರಾಣಾನನ್ನು ತಲೆಮರೆಸಿಕೊಂಡಿರುವ ಆರೋಪಿ ಎಂದು ಘೋಷಿಸಿರುವ ಭಾರತ, ಆತನ ಹಸ್ತಾಂತರ ಕೋರಿ ಅಮೆರಿಕಕ್ಕೆ ಅರ್ಜಿ ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಕಳೆದ ವರ್ಷ ಜೂನ್‌ 10ರಂದು ಲಾಸ್‌ ಏಂಜಲೀಸ್‌ನಲ್ಲಿ ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.