
ಪ್ರಜಾವಾಣಿ ವಾರ್ತೆನ್ಯೂಯಾರ್ಕ್ (ಐಎಎನ್‌ಎಸ್): ಸುದೀರ್ಘ 28 ವರ್ಷಗಳ ನಂತರ ಜಿ-24 ರಾಷ್ಟ್ರಗಳ ಅಧ್ಯಕ್ಷ ಸ್ಥಾನ ಮತ್ತೊಮ್ಮೆ ಭಾರತ ಅಲಂಕರಿಸಿದೆ. ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರು ಎರಡನೇ ಬಾರಿಗೆ ಇದರ ಅಧ್ಯಕ್ಷರಾಗಿದ್ದಾರೆ.
1983ರಲ್ಲಿ ಇಂದಿರಾ ಗಾಂಧಿ ಅವರ ಸರ್ಕಾರದಲ್ಲಿ ಹಣಕಾಸು ಸಚಿವರಾಗಿದ್ದ ಮುಖರ್ಜಿ ಜಿ-24 ರಾಷ್ಟ್ರಗಳನ್ನು ಮುನ್ನಡೆಸಿದ್ದರು. ಕಾಕತಾಳೀಯ ಎಂಬಂತೆ ಮನಮೋಹನ್ ಸಿಂಗ್ ಅವರ ಸರ್ಕಾರದಲ್ಲಿಯು ಅದೇ ಹೊಣೆಗಾರಿಕೆ ನಿರ್ವಹಿಸುತ್ತಿದ್ದು, ಜಿ-24 ರಾಷ್ಟ್ರಗಳನ್ನು ಎರಡನೇ ಬಾರಿಗೆ ಮುನ್ನಡೆಸುವ ಅವಕಾಶ ಲಭಿಸಿದೆ.
ಭಾನುವಾರ ಇಲ್ಲಿ ಪ್ರಧಾನಿಯವರೊಂದಿಗೆ ಮಾತುಕತೆ ನಡೆಸಿದ ಬಳಿಕ ಪತ್ರಕರ್ತರಿಗೆ ಈ ವಿಷಯವನ್ನು ಸ್ವತಃ ಅವರೇ ತಿಳಿಸಿದರು.
`ಸಾಮಾನ್ಯವಾಗಿ ಈ ರೀತಿ ಪುನರಾವರ್ತನೆಯಾಗುವುದಿಲ್ಲ. ಆದರೆ, ಅಕಸ್ಮಾತ್ ಆಗಿ ಇಂತಹದ್ದೊಂದು ಸಂದರ್ಭ ಮರುಕಳಿಸಿದೆ~ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.