ADVERTISEMENT

ಆಸ್ಟ್ರೇಲಿಯಾ: ಪ್ರವಾಹದ ನೀರಿನಲ್ಲಿ ಕಾರು ಸಿಲುಕಿ ಭಾರತದ ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2024, 14:13 IST
Last Updated 16 ಫೆಬ್ರುವರಿ 2024, 14:13 IST
<div class="paragraphs"><p>ಸಾವು–ಪ್ರಾತಿನಿಧಿಕ ಚಿತ್ರ</p></div>

ಸಾವು–ಪ್ರಾತಿನಿಧಿಕ ಚಿತ್ರ

   

ಮೇಲ್ಬರ್ನ್: ಆಸ್ಟ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ನಲ್ಲಿ ಭಾರತ ಮೂಲದ 28 ವರ್ಷದ ಮಹಿಳೆ ಕಾರಿನಲ್ಲಿ ಮೃತಪಟ್ಟಿದ್ದಾರೆ. ಮಹಿಳೆಯ ಕಾರು ಪ್ರವಾಹದ ನೀರಿನಲ್ಲಿ ಸಿಲುಕಿರುವುದರಿಂದಾಗಿ ಈ ಘಟನೆ ಸಂಭವಿಸಿರಬಹುದು ಎಂದು ಅಧಿಕಾರಿಗಳು ಶುಕ್ರವಾರ ತಿಳಿಸಿದ್ದಾರೆ. 

ಕ್ಯಾನ್‌ಬೆರಾದಲ್ಲಿರುವ ಭಾರತದ ಹೈಕಮಿಷನ್, ‘ಮೌಂಟ್ ಇಸಾದ ಬಳಿ ಭಾರತದ ಮಹಿಳೆ ಮೃತಪಟ್ಟಿದ್ದಾರೆ. ಅವರ ಕುಟುಂಬದೊಂದಿಗೆ ಸಂಪರ್ಕ ಸಾಧಿಸಲಾಗಿದ್ದು, ಅಗತ್ಯವಿರುವ ಎಲ್ಲ ಸಹಕಾರಗಳನ್ನು ನೀಡಲಾಗುವುದು’ ಎಂದು ಹೇಳಿದೆ. 

ADVERTISEMENT

ಸಾವಿಗೀಡಾಗಿರುವ ಸಂತ್ರಸ್ತೆಯ ಗುರುತನ್ನು ಬಹಿರಂಗಪಡಿಸದ ಮೌಂಟ್ ಇಸಾ ಪೊಲೀಸರು, ಸಂತ್ರಸ್ತೆಯ ಕಾರು ಪ್ರವಾಹದ ನೀರಿನಲ್ಲಿ ಸಿಲುಕಿಕೊಂಡಿತ್ತು. ಅವರ ಸಾವಿಗೆ ಕಾರಣವೇನು ಎಂಬುದರ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.