ADVERTISEMENT

ಅಫ್ಗಾನಿಸ್ತಾನ| ಮಹಿಳೆಯರಿಗೆ ನಿರ್ಬಂಧ: ಕಾರ್ಯ ಸ್ಥಗಿತಗೊಳಿಸಿದ 3 ಎನ್‌ಜಿಒಗಳು

ಏಜೆನ್ಸೀಸ್
Published 25 ಡಿಸೆಂಬರ್ 2022, 14:39 IST
Last Updated 25 ಡಿಸೆಂಬರ್ 2022, 14:39 IST
ಅಫ್ಘಾನ್‌ ಮಹಿಳೆಯರು ನಿಂತಿರುವ ದೃಶ್ಯ (ಎಎಫ್‌ಪಿ ಚಿತ್ರ)
ಅಫ್ಘಾನ್‌ ಮಹಿಳೆಯರು ನಿಂತಿರುವ ದೃಶ್ಯ (ಎಎಫ್‌ಪಿ ಚಿತ್ರ)   

ಕಾಬೂಲ್‌ (ಎಪಿ): ಮಹಿಳೆಯರು ಸರ್ಕಾರೇತರ ಸಂಸ್ಥೆ (ಎನ್‌ಜಿಒ)ಗಳಿಗೆ ಪ್ರವೇಶಿಸುವಂತಿಲ್ಲ ಎಂದು ತಾಲಿಬಾನ್‌ ಸರ್ಕಾರ ನಿರ್ಬಂಧ ವಿಧಿಸಿದ ಬೆನ್ನಲ್ಲೇ ಅಂತರರಾಷ್ಟ್ರೀಯ ಮಟ್ಟದಲ್ಲಿ ಮತ್ತು ಸ್ಥಳೀಯವಾಗಿ ಕಾರ್ಯನಿರ್ವಹಿಸುತ್ತಿದ್ದ ಮೂರು ಎನ್‌ಜಿಒಗಳು ಭಾನುವಾರ ತಮ್ಮ ಕಾರ್ಯವನ್ನು ಸ್ಥಗಿತಗೊಳಿಸಿವೆ.

ಸೇವ್‌ ದಿ ಚಿಲ್ಡ್ರನ್‌, ದಿ ನಾ‌ರ್ವೇಜಿಯನ್‌ ರೆಫ್ಯೂಜಿ ಕೌನ್ಸಿಲ್‌ ಮತ್ತು ಸಿಎಆರ್‌ಇ ಹೆಸರಿನ ಎನ್‌ಜಿಒಗಳು ಕಾರ್ಯ ನಿಲ್ಲಿಸಿವೆ.ದೇಶದಲ್ಲಿ ಒಟ್ಟು 468 ಮಹಿಳಾ ಸಿಬ್ಬಂದಿಯಿದ್ದಾರೆ. ಮಹಿಳೆಯರು ಇಲ್ಲದೆ ಮಕ್ಕಳು, ಕಷ್ಟದಲ್ಲಿರುವ ಮಹಿಳೆಯರು ಮತ್ತು ಪುರುಷನ್ನು ತಲುಪಲು ಸಾಧ್ಯವಿಲ್ಲ ಎಂದು ಮೂರು ಸಂಸ್ಥೆಗಳು ತಿಳಿಸಿವೆ.

ಮಹಿಳೆಯರು ಶಿರವಸ್ತ್ರವನ್ನು ಸರಿಯಾಗಿ ಬಳಸುತ್ತಿಲ್ಲ ಎನ್ನುವ ಕಾರಣಕ್ಕೆ ಅವರು ಎನ್‌ಜಿಒಗಳಲ್ಲಿ ಕೆಲಸ ಮಾಡುವುದನ್ನು ತಾಲಿಬಾನ್ ಸರ್ಕಾರ ನಿಷೇಧಿಸಿದೆ. ಈ ಹಿಂದೆ ವಿಶ್ವವಿದ್ಯಾಲಯ, ಪಾರ್ಕ್‌, ಜಿಮ್‌ಗಳ ಪ್ರವೇಶಕ್ಕೂ ಮಹಿಳೆಯರಿಗೆ ನಿರ್ಬಂಧ ಹೇರಲಾಗಿತ್ತು.

ADVERTISEMENT

ತಾಲಿಬಾನಿಗಳ ಈ ನಿರ್ಧಾರವನ್ನು ಅಮೆರಿಕ ತೀವ್ರವಾಗಿ ಖಂಡಿಸಿದ್ದು, ಇದರಿಂದ ಕಷ್ಟದಲ್ಲಿರುವ ಲಕ್ಷಾಂತರ ಮಂದಿಗೆ ದೊರೆಯುವ ಸಹಾಯ ಹಸ್ತ ಇಲ್ಲವಾಗುತ್ತದೆ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.