ADVERTISEMENT

ಪಾಕ್‌ ಜೈಲಿನ‌ಲ್ಲಿ 308 ಭಾರತೀಯ ಕೈದಿಗಳು

ಪಿಟಿಐ
Published 1 ಜುಲೈ 2023, 16:16 IST
Last Updated 1 ಜುಲೈ 2023, 16:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಇಸ್ಲಾಮಾಬಾದ್‌: ದ್ವಿಪಕ್ಷೀಯ ಒಪ್ಪಂದದ ಭಾಗವಾಗಿ, ಪಾಕಿಸ್ತಾನವು ತನ್ನ ದೇಶದ ಜೈಲಿನಲ್ಲಿರುವ 308 ಭಾರತೀಯ ಕೈದಿಗಳ ಪಟ್ಟಿಯನ್ನು ಭಾರತೀಯ ಹೈಕಮಿಷನ್‌ಗೆ ಶನಿವಾರ ಹಸ್ತಾಂತರಿಸಿದೆ. ಇವರಲ್ಲಿ 42 ಮಂದಿ ನಾಗರಿಕ ಕೈದಿಗಳಾಗಿದ್ದರೆ, 266 ಮಂದಿ ಮೀನುಗಾರರು.

‘2008ರ ರಾಜತಾಂತ್ರಿಕ ಪ‍ರವಾನಗಿ ಒಪ್ಪಂದಕ್ಕೆ ಅನ್ವಯ ಈ ಪಟ್ಟಿಯನ್ನು ಹಸ್ತಾಂತರಿಸಲಾಗಿದೆ’ ಎಂದು ವಿದೇಶಾಂಗ ಕಚೇರಿ (ಎಫ್‌ಒ) ತಿಳಿಸಿದೆ.

‘ಭಾರತವು ನವದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ಗೆ ಪಾಕಿಸ್ತಾನಿ ಕೈದಿಗಳ ಪಟ್ಟಿಯನ್ನು ನೀಡಿದ್ದು, ಅದರಲ್ಲಿ 417 ಕೈದಿಗಳ ಹೆಸರಿವೆ.‌ ಇವರಲ್ಲಿ 343 ಮಂದಿ ನಾಗರಿಕ ಕೈದಿಗಳಿದ್ದರೆ, 74 ಮಂದಿ ಮೀನುಗಾರರಿದ್ದಾರೆ’ ಎಂದು ಎಫ್‌ಒ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.