ಗಾಜಾದಲ್ಲಿ ಇಸ್ರೇಲ್ ವೈಮಾನಿಕ ದಾಳಿ
ರಾಯಿಟರ್ಸ್
ಕೈರೊ, ಈಜಿಪ್ಟ್: ಇಸ್ರೇಲ್‌ನ ಸೇನೆಯು ಗಾಜಾಪಟ್ಟಿಯ ಮೇಲೆ ಆಕ್ರಮಣ ಆರಂಭಿಸಿದ ಬಳಿಕ ಇದುವರೆವಿಗೆ ಒಟ್ಟು 32,705 ಮಂದಿ ಪ್ಯಾಲೆಸ್ಟೀನಿಯರು ಮೃತಪಟ್ಟಿದ್ದಾರೆ.
ಗಾಜಾ ಬಂಡುಕೋರರ ಅಪ್ರಚೋದಿತ ದಾಳಿಯ ಬಳಿಕ ಇಸ್ರೇಲ್ ಸೇನೆ ಕಳೆದ ವರ್ಷದ ಅಕ್ಟೋಬರ್ 7ರಂದು ಗಾಜಾಪಟ್ಟಿಯಲ್ಲಿ ಬಂಡುಕೋರರನ್ನು ಗುರಿಯಾಗಿಸಿ ದಾಳಿ ವೈಮಾನಿಕ ದಾಳಿ ಆರಂಭಿಸಿತ್ತು.
ಅಲ್ಲದೆ, ಸೇನೆ ದಾಳಿಯಿಂದಾಗಿ 75,190 ಜನರು ಗಾಯಗೊಂಡಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ಶನಿವಾರ ಹೇಳಿಕೆ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.