ADVERTISEMENT

ಸೌದಿ ಅರೇಬಿಯಾ: ಭೀಕರ ಬಸ್‌ ಅಪಘಾತದಲ್ಲಿ 35 ವಿದೇಶಿಯರು ಸಾವು

ಏಜೆನ್ಸೀಸ್
Published 17 ಅಕ್ಟೋಬರ್ 2019, 2:54 IST
Last Updated 17 ಅಕ್ಟೋಬರ್ 2019, 2:54 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ರಿಯಾದ್:ಸೌದಿ ಅರೇಬಿಯಾದ ಮದಿನಾ ಬಳಿ ಸಂಭವಿಸಿದ ಭೀಕರ ಬಸ್‌ ಅಪಘಾತದಲ್ಲಿ 35 ವಿದೇಶಿಯರು ಮೃತಪಟ್ಟಿದ್ದಾರೆ ಎಂದು ಅಲ್ಲಿನ ಮಾಧ್ಯಮ ಗುರುವಾರ ಬೆಳಿಗ್ಗೆ ವರದಿ ಮಾಡಿದೆ.ಬುಧವಾರ ಘಟನೆ ಸಂಭವಿಸಿದೆ.

‘ಮದಿನಾದ ಅಲ್–ಅಖಲ್ ಎಂಬಲ್ಲಿ ಬೃಹತ್ ಗಾತ್ರದ ಯಂತ್ರವೊಂದಕ್ಕೆ ಖಾಸಗಿ ಬಸ್ ಡಿಕ್ಕಿಯಾಗಿದೆ. ಪರಿಣಾಮವಾಗಿ 35 ವಿದೇಶಿಯರು ಮೃತಪಟ್ಟಿದ್ದಾರೆ. ಗಾಯಾಳುಗಳನ್ನು ಸಮೀಪದ ಅಲ್–ಹಮ್ಮಾ ಆಸ್ಪತ್ರೆಗೆ ದಾಖಲಿಸಲಾಗಿದೆ’ ಎಂದು ಮದಿನಾ ಪೊಲೀಸ್ ವಕ್ತಾರರು ತಿಳಿಸಿದ್ದಾರೆ. ಗಾಯಾಳುಗಳ ಪೈಕಿ ನಾಲ್ವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಮೂಲಗಳು ತಿಳಿಸಿವೆ.

ಮೃತರಲ್ಲಿ ಹೆಚ್ಚಿನವರು ಅರಬ್ ಮತ್ತು ಏಷ್ಯಾ ರಾಷ್ಟ್ರಗಳ ಯಾತ್ರಿಕರು ಎನ್ನಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.