ADVERTISEMENT

5 ಸಾವಿರ ಆಮೆ ಮರಿ ಸಾಗಣೆ: ಬಂಧನ

​ಪ್ರಜಾವಾಣಿ ವಾರ್ತೆ
Published 26 ಜೂನ್ 2019, 19:45 IST
Last Updated 26 ಜೂನ್ 2019, 19:45 IST
   

ಸಿಂಗಪುರ (ಪಿಟಿಐ): ಐದು ಸಾವಿರ ಆಮೆ ಮರಿಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದ ನಾಲ್ವರು ಭಾರತೀಯರನ್ನು ಮಲೇಷ್ಯಾದಲ್ಲಿ ಬಂಧಿಸಲಾಗಿದೆ.

5,255 ಆಮೆ ಮರಿಗಳನ್ನು ವಶಪಡಿಸಿಕೊಂಡಿರುವ ಮಲೇಷ್ಯಾ ಸುಂಕ ಇಲಾಖೆ ಅಧಿಕಾರಿಗಳು ದೂರು ದಾಖಲಿಸಿಕೊಂಡಿದ್ದಾರೆ.

ಈ ಆಮೆಗಳನ್ನು ಜೂನ್ 20ರಂದು ಕ್ವಾಲಲಾಂಪೂರ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಪಡಿಸಿಕೊಳ್ಳಲಾಗಿದೆ ಎಂದು ಕೇಂದ್ರೀಯ ಸುಂಕ ಇಲಾಖೆಯ ಕೇಂದ್ರ ಭಾಗದ ನಿರ್ದೇಶಕ ದಾತುಕ್ ಜುಲ್ಕುರಿಯನ್‌ ಮೊಹಮದ್‌ ಯೂಸೂಫ್‌ ಹೇಳಿದ್ದಾರೆ.

ADVERTISEMENT

ಚೀನಾದ ಗಂಗುಜುವಾದಿಂದ ಬಂದಿದ್ದ ಇಬ್ಬರ ಲಗೇಜುಗಳನ್ನು ತಪಾಸಣೆ ಮಾಡಿದಾಗ ಆಮೆಗಳು ಪತ್ತೆಯಾಗಿವೆ. ಸೂಟ್‌ಕೇಸ್‌ ಒಳಗೆ ಬಾಕ್ಸ್‌ವೊಂದರಲ್ಲಿ ಇಟ್ಟಿದ್ದ ಕೆಂಪು ಬಣ್ಣದ ಮರಿಗಳನ್ನು ವಿಮಾನ ನಿಲ್ದಾಣದಲ್ಲಿ ತಪಾಸಣೆ ವೇಳೆ ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.

ಸೂಟ್‌ಕೇಸ್‌ನಲ್ಲಿ ಗಾಳಿಬೆಳಕಿನ ವ್ಯವಸ್ಥೆ ಹಾಗೂ ಅವುಗಳಿಗೆ ಆಹಾರ ಸಿಗದ ಕಾರಣ ಮರಿಗಳು ಬಳಲಿ ಹಲವು ಸಾವನ್ನಪ್ಪಿವೆ ಎಂದು ತಿಳಿಸಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ 14 ಕಿ. ಗ್ರಾಂ ಮಾದಕ ವಸ್ತು ಇಟ್ಟುಕೊಂಡಿದ್ದ ಆರೋಪದ ಮೇಲೆ ಇಬ್ಬರು ಭಾರತೀಯರನ್ನು ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.