ಮೆಲ್ಬರ್ನ್: ಬಹುತೇಕ ಭಾರತೀಯರೇ ಹೆಚ್ಚಾಗಿ ಬಳಸುತ್ತಿದ್ದ, ಉದ್ಯೋಗದಾತ ಕಂಪನಿಗಳು ಒದಗಿಸುತ್ತಿರುವ, ಜನಪ್ರಿಯ ‘457 ವೀಸಾ’ ಕಾರ್ಯಕ್ರಮವನ್ನು ಆಸ್ಟ್ರೇಲಿಯಾ ರದ್ದುಗೊಳಿಸಿದೆ.
ಮಾರ್ಚ್ 18ರಂದು ಈ ಕ್ರಮ ಕೈಗೊಳ್ಳಲಾಗಿದ್ದು, ರದ್ದತಿಯ ನಂತರ ಪರ್ಯಾಯವಾಗಿ ಇಂಗ್ಲಿಷ್ ಭಾಷಾ ಕೌಶಲ ಮತ್ತು ಔದ್ಯೋಗಿಕ ಕೌಶಲಗಳನ್ನು ಒಳಗೊಂಡ ಕಠಿಣ ಯೋಜನೆ ‘ಟೆಂಪೊರರಿ ಶಾರ್ಟೇಜ್ ಸ್ಕಿಲ್ಸ್’ (ಟಿಎಸ್‌ಎಸ್) ಆರಂಭಿಸಿದೆ.
ಮೊದಲಿದ್ದ ಯೋಜನೆಯಿಂದ 95 ಸಾವಿರ ವಿದೇಶಿಯರಿಗೆ ಅನುಕೂಲವಾಗುತ್ತಿತ್ತು. ಅವರಲ್ಲಿ ಭಾರತೀಯರೇ ಶೇಕಡ 25ರಷ್ಟು ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.