ADVERTISEMENT

ಸುಡಾನ್‌ನಲ್ಲಿ ಎರಡು ಬುಡಕಟ್ಟುಗಳ ನಡುವೆ ಜನಾಂಗೀಯ ಘರ್ಷಣೆ: 47 ಸಾವು

ಏಜೆನ್ಸೀಸ್
Published 18 ಜನವರಿ 2021, 13:42 IST
Last Updated 18 ಜನವರಿ 2021, 13:42 IST
ಪ್ರಕ್ಷುಬ್ಧಗೊಂಡಿರುವ ದಕ್ಷಿಣ ಡಾರ್‌ಫೂರ್‌ನಲ್ಲಿ ಬೀಡು ಬಿಟ್ಟಿರುವ ಭದ್ರತಾ ಪಡೆಗಳು (ಎಎಫ್‌ಪಿ)
ಪ್ರಕ್ಷುಬ್ಧಗೊಂಡಿರುವ ದಕ್ಷಿಣ ಡಾರ್‌ಫೂರ್‌ನಲ್ಲಿ ಬೀಡು ಬಿಟ್ಟಿರುವ ಭದ್ರತಾ ಪಡೆಗಳು (ಎಎಫ್‌ಪಿ)   

ಖಾರ್ಟೂಮ್: ಸುಡಾನ್‌ನ ದಕ್ಷಿಣ ಡಾರ್‌ಫೂರ್‌ನಲ್ಲಿ ಎರಡು ಗುಂಪುಗಳ ನಡುವೆ ನಡೆದ ಜನಾಂಗೀಯ ಘರ್ಷಣೆಯಲ್ಲಿ 47 ಮಂದಿ ಸಾವಿಗೀಡಾಗಿದ್ದಾರೆ ಎಂದು ಸ್ಥಳೀಯ ಮುಖಂಡರೊಬ್ಬರು ಸೋಮವಾರ ಹೇಳಿದ್ದಾರೆ.

ಪ್ರಕ್ಷುಬ್ಧಗೊಂಡಿರುವ ದಕ್ಷಿಣ ಡಾರ್‌ಫೂರ್‌ನಲ್ಲಿ ನಡೆದ ಪ್ರತ್ಯೇಕ ಗಲಭೆಗಳಲ್ಲಿ 80 ಮಂದಿ ಸಾವಿಗೀಡಾದ ಮರು ದಿನವೇ ಈ ಘಟನೆಯೂ ನಡೆದಿದೆ.

'ರೈಜಿಗಾಟ್ ಬುಡಕಟ್ಟು ಮತ್ತು ಫಲ್ಲಾಟಾ ಬುಡಕಟ್ಟುಗಳ ನಡುವಿನ ಘರ್ಷಣೆಗಳು ನಿಂತಿವೆ. ಘರ್ಷಣೆಯಲ್ಲಿ 47 ಮಂದಿ ಸಾವಿಗೀಡಾಗಿದ್ದಾರೆ ಎಂಬುದು ನಮ್ಮ ಲೆಕ್ಕಕ್ಕೆ ಸಿಕ್ಕಿದೆ,' ಎಂದು ಸ್ಥಳೀಯ ನಾಯಕ ಮೊಹಮ್ಮದ್ ಸಾಲೇಹ್ ಎಎಫ್‌ಪಿಗೆ ತಿಳಿಸಿದ್ದಾರೆ.

ADVERTISEMENT

ಘಟನೆಯಲ್ಲಿ ಹಲವಾರು ಮನೆಗಳು ಸುಟ್ಟುಹೋಗಿವೆ ಎಂದು, ಅರಬ್‌ಏತರ ಫಲ್ಲಾಟಾ ಜನಾಂಗದ ಸಾಲೇಹ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.