ADVERTISEMENT

ರಷ್ಯಾ ಶೆಲ್‌ ದಾಳಿ: 12 ನಾಗರಿಕರು ಸಾವು

ಪಿಟಿಐ
Published 6 ಜುಲೈ 2022, 17:42 IST
Last Updated 6 ಜುಲೈ 2022, 17:42 IST
ರಷ್ಯಾ ಪಡೆಗಳು ಬುಧವಾರ ನಡೆಸಿದ ಕ್ಷಿಪಣಿ ದಾಳಿಗೆ ಉಕ್ರೇನಿನ ಎರಡನೇ ದೊಡ್ಡ ನಗರ ಹಾರ್ಕಿವ್‌ನಲ್ಲಿರುವ ವಿಶ್ವವಿದ್ಯಾಲಯದ ಆಡಳಿತ ಕಚೇರಿ ಧ್ವಂಸವಾಗಿದೆ –ಎಎಫ್‌ಪಿ ಚಿತ್ರ
ರಷ್ಯಾ ಪಡೆಗಳು ಬುಧವಾರ ನಡೆಸಿದ ಕ್ಷಿಪಣಿ ದಾಳಿಗೆ ಉಕ್ರೇನಿನ ಎರಡನೇ ದೊಡ್ಡ ನಗರ ಹಾರ್ಕಿವ್‌ನಲ್ಲಿರುವ ವಿಶ್ವವಿದ್ಯಾಲಯದ ಆಡಳಿತ ಕಚೇರಿ ಧ್ವಂಸವಾಗಿದೆ –ಎಎಫ್‌ಪಿ ಚಿತ್ರ   

ಕ್ರಾಮರಸ್ಕ್‌ (ಉಕ್ರೇನ್‌)/ಬ್ರಸೆಲ್ಸ್‌/ ಮಾಸ್ಕೊ: ರಷ್ಯಾ ಪಡೆಗಳು ಉಕ್ರೇನ್ ಮೇಲೆ ದಾಳಿ ತೀವ್ರಗೊಳಿಸಿದ್ದು, ಕಳೆದ 24 ತಾಸುಗಳಲ್ಲಿ ನಾಗರಿಕರನ್ನು ಗುರಿಯಾಗಿಸಿ ನಡೆಸಿರುವ ಶೆಲ್‌ ದಾಳಿಯಲ್ಲಿ 12 ಮಂದಿ ನಾಗರಿಕರು ಮೃತಪಟ್ಟಿದ್ದಾರೆ. ಹಲವಾರು ಮಂದಿ ಗಾಯಗೊಂಡಿದ್ದಾರೆ ಎಂದು ಉಕ್ರೇನ್‌ ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

‘ಬುಧವಾರ ಬೆಳಿಗ್ಗೆ ಅವ್‌ದಿವ್ಕಾ, ಸ್ಲೊವಿಯಾನ್‌ಸ್ಕ್‌, ಕ್ರಸ್ನೊರಿವ್ಕಾ ಮತ್ತು ಕುರಖೋವ್‌ದಲ್ಲಿ ನಡೆದ ದಾಳಿಗಳಲ್ಲಿ ಈ ಸಾವು, ನೋವು ಸಂಭವಿಸಿದೆ. ಪ್ರತಿಅಪರಾಧಕ್ಕೂ ರಷ್ಯಾ ಸೈನಿಕರನ್ನು ಶಿಕ್ಷಿಸುತ್ತೇವೆ’ ಎಂದು ಡೊನೆಟ್‌ಸ್ಕ್‌ ಗವರ್ನರ್‌ ಪಾವ್ಲೊ ಕಿರಿಲೆನ್‌ಕೊ ತಿಳಿಸಿದ್ದಾರೆ.

ಉಕ್ರೇನ್‌ನ ಎರಡನೇ ದೊಡ್ಡ ನಗರಹಾರ್ಕಿವ್‌ ಮೇಲೆ ತಡರಾತ್ರಿ ರಷ್ಯಾ ಪಡೆಗಳು ಕ್ಷಿಪಣಿ ದಾಳಿ ನಡೆಸಿವೆ. ವಿಶ್ವವಿದ್ಯಾಲಯದ ಆಡಳಿತ ಕಟ್ಟಡ ಧ್ವಂಸಗೊಂಡಿದೆ. ಮೂವರು ಗಾಯಗೊಂಡಿದ್ದಾರೆ ಎಂದು ಹಾರ್ಕಿವ್‌ ಗವರ್ನರ್‌ ಆಲೆಹ್‌ ಸಿನಿಹುವಾ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.