ADVERTISEMENT

50 ಸಾವಿರ ಭಾರತೀಯರಿಗೆ ಅಮೆರಿಕ ಪೌರತ್ವ

ಪಿಟಿಐ
Published 19 ಅಕ್ಟೋಬರ್ 2018, 17:34 IST
Last Updated 19 ಅಕ್ಟೋಬರ್ 2018, 17:34 IST
ಅಮೆರಿಕ
ಅಮೆರಿಕ   

ವಾಷಿಂಗ್ಟನ್‌: 50,802 ಭಾರತೀಯರು ಕಳೆದ ವರ್ಷ (2017) ಅಮೆರಿಕದ ಪೌರತ್ವ ಪಡೆದಿದ್ದಾರೆ. ಒಟ್ಟಾರೆ 2017ರಲ್ಲಿ 7.07 ಲಕ್ಷ ವಿದೇಶಿಯರು ಅಮೆರಿಕದ ಪೌರತ್ವ ಪಡೆದಿದ್ದು, ಇವರಲ್ಲಿ ಮೆಕ್ಸಿಕೊದವರೇ ಅತಿ ಹೆಚ್ಚು ಸಂಖ್ಯೆಯಲ್ಲಿದ್ದಾರೆ ಎಂದು ಗೃಹ ಇಲಾಖೆಯ ವಾರ್ಷಿಕ ವರದಿ ತಿಳಿಸಿದೆ.

ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಪೌರತ್ವ ಪಡೆದಿದ್ದಾರೆ. 3,96,294 ಮಹಿಳೆಯರು ಮತ್ತು 3,10,987 ಪುರುಷರು ಪೌರತ್ವ ಪಡೆದಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT