ADVERTISEMENT

ನೈಜರ್‌ ಜಿರಾಫೆ ಪಾರ್ಕ್‌ಗೆ ಬಂದಿದ್ದ ಫ್ರಾನ್ಸ್‌ ಪ‍್ರವಾಸಿಗರೂ ಸೇರಿ 8 ಮಂದಿ ಕೊಲೆ

ನೈಜರ್: ಅಪರಿಚಿತ ವ್ಯಕ್ತಿಯಿಂದ ಗುಂಡಿನ ದಾಳಿ

ಏಜೆನ್ಸೀಸ್
Published 10 ಆಗಸ್ಟ್ 2020, 6:11 IST
Last Updated 10 ಆಗಸ್ಟ್ 2020, 6:11 IST
ನೈಜರ್ ಸಮೀಪದ ವನ್ಯಜೀವಿಧಾಮದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿ ಎಂಟು ಮಂದಿ ಹತ್ಯೆ ಮಾಡಿದ ಸ್ಥಳದಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ವಾಹನ
ನೈಜರ್ ಸಮೀಪದ ವನ್ಯಜೀವಿಧಾಮದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಗುಂಡಿನ ದಾಳಿ ನಡೆಸಿ ಎಂಟು ಮಂದಿ ಹತ್ಯೆ ಮಾಡಿದ ಸ್ಥಳದಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿರುವ ವಾಹನ   

ನಿಯಾಮೆ(ನೈಜರ್‌): ಇಲ್ಲಿಗೆ ಸಮೀಪದ ವನ್ಯಜೀವಿಧಾಮವೊಂದರಲ್ಲಿಭಾನುವಾರ ಅಪರಿಚಿತ ವ್ಯಕ್ತಿಯೊಬ್ಬ ಆರು ಮಂದಿ ಫ್ರಾನ್ಸ್‌ ಪ್ರಜೆಗಳು ಮತ್ತು ಇಬ್ಬರು ನೈಜೀರಿಯನ್‌ ಗೈಡ್‌ಗಳನ್ನು ಗುಂಡಿಕ್ಕಿ ಕೊಂದಿದ್ದಾನೆ.

ವನ್ಯಜೀವಿಧಾಮದಲ್ಲಿರುವ ಕೌರೆ ಎಂಬತಿ ಕಾಯ್ದಿಟ್ಟ ಜಿರಾಫೆ ಸಂರಕ್ಷಣಾ ಪ್ರದೇಶದಲ್ಲಿ ಈ ದಾಳಿ ನಡೆದಿದೆ ಎಂದು ನೈಜರ್‌ನ ಸಚಿವರೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ. ಫ್ರಾನ್ಸ್ ಅಧ್ಯಕ್ಷರ ಕಚೇರಿಯೂ ಈ ವಿಷಯವನ್ನು ದೃಢಪಡಿಸಿದೆ.

ಈ ಪ್ರದೇಶವು ಸಂರಕ್ಷಿತ ರಾಷ್ಟ್ರೀಯ ಉದ್ಯಾನವನವಾಗಿದ್ದು, ರಾಜಧಾನಿಯ ಆಗ್ನೇಯಕ್ಕೆ 70 ಕಿಲೋಮೀಟರ್ (45 ಮೈಲಿ) ದೂರದಲ್ಲಿ. ದಟ್ಟವಾದ ಸಸ್ಯಸಂಪತ್ತನ್ನು ಹೊಂದಿದ್ದು, ಎತ್ತರದ ಮರಗಳಿವೆ. ವಿಶಿಷ್ಟ ಜಿರಾಫೆಗಳನ್ನು ನೋಡುವುದಕ್ಕಾಗಿಯೇ ಪ್ರತಿವರ್ಷ ನೂರಾರು ಜನರು ಈ ವನ್ಯಜೀವಿ ಧಾಮಕ್ಕೆ ಭೇಟಿ ನೀಡುತ್ತಾರೆ. ಈ ಉದ್ಯಾನವು ಟಿಲ್ಲಾಬೆರಿ ಪ್ರದೇಶದಲ್ಲಿದೆ. ಇಲ್ಲಿರುವ ಐಎಸ್‌ ಉಗ್ರರೊಂದಿಗೆ ಸಂಪರ್ಕ ಹೊಂದಿರುವ ಜಿಹಾದಿಗಳು 2017ರಲ್ಲಿ ನಾಲ್ವರು ಅಮೆರಿಕ ನಾಗರಿಕರು ಮತ್ತು ಇಬ್ಬರು ನೈಜೀರಿಯನ್‌ ಪ್ರಜೆಗಳನ್ನು ಹತ್ಯೆ ಮಾಡಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.