ಪೋರ್ಟ್ ಮೊರ್ಸೆಬೆ: ಪೆಸಿಫಿಕ್ ಸಾಗರದಲ್ಲಿ ಬರುವ ‘ಪಪುವಾ ನ್ಯೂ ಗಿನಿಯಾ’ ದ್ವೀಪ ರಾಷ್ಟ್ರದಲ್ಲಿ ಭಾನುವಾರ (ಫೆ.26) ಬೆಳಗಿನ ಜಾವ ಪ್ರಬಲ ಭೂಕಂಪ ಸಂಭವಿಸಿದೆ.
ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 6.2 ದಾಖಲಾಗಿದೆ ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಕೇಂದ್ರ ತಿಳಿಸಿದೆ.
ಪಶ್ಚಿಮ ಬ್ರಿಟನ್‌ನ 38 ಕಿ.ಮೀ ಭೂಮಿಯ ಆಳದಲ್ಲಿ ಕಂಪನದ ಕೇಂದ್ರ ಬಿಂದು ದಾಖಲಾಗಿದೆ. ಆದರೆ ಸುನಾಮಿಯ ಆತಂಕವಿಲ್ಲ ಎಂದು ವರದಿಯಾಗಿದೆ.
ತಕ್ಷಣಕ್ಕೆ ಆಸ್ತಿ ಪಾಸ್ತಿ ನಷ್ಟ ಹಾಗೂ ಪ್ರಾಣಹಾನಿ ಸಂಭವಿಸಿದ ಬಗ್ಗೆ ಯಾವುದೇ ವರದಿಯಾಗಿಲ್ಲ.
ಅಫ್ಘಾನಿಸ್ಥಾನದಲ್ಲಿ 4.3 ತೀವ್ರತೆಯ ಭೂಕಂಪ
ಅಫ್ಘಾನಿಸ್ಥಾನದಲ್ಲೂ ಕೂಡ ಭಾನುವಾರ ಭೂಕಂಪನ ಸಂಭಿವಿಸಿದ್ದು, ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 4.3 ದಾಖಲಾಗಿದೆ. ರಾತ್ರಿ 2 ಗಂಟೆ ಸುಮಾರಿಗೆ ಭೂಮಿ ಕಂಪಿಸಿದೆ. ಭೂಮಿಯ 180 ಕಿಮೀ ಆಳದಲ್ಲಿ ಕಂಪನದ ಕೇಂದ್ರ ಬಿಂದು ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.