ADVERTISEMENT

ಮೆಕ್ಸಿಕೊದಲ್ಲಿ ಪ್ರಬಲ ಭೂಕಂಪ: ಇಬ್ಬರ ಸಾವು

ಏಜೆನ್ಸೀಸ್
Published 22 ಸೆಪ್ಟೆಂಬರ್ 2022, 13:26 IST
Last Updated 22 ಸೆಪ್ಟೆಂಬರ್ 2022, 13:26 IST
ಭೂಕಂಪನದ ವೇಳೆ ಮೆಕ್ಸಿಕೊ ಸಿಟಿಯ ಜನರು ಮನೆಗಳಿಂದ ಹೊರಬಂದಿದ್ದರು –ಎಎಫ್‌ಪಿ ಚಿತ್ರ
ಭೂಕಂಪನದ ವೇಳೆ ಮೆಕ್ಸಿಕೊ ಸಿಟಿಯ ಜನರು ಮನೆಗಳಿಂದ ಹೊರಬಂದಿದ್ದರು –ಎಎಫ್‌ಪಿ ಚಿತ್ರ   

ಮೆಕ್ಸಿಕೊ ಸಿಟಿ: ಮೆಕ್ಸಿಕೊದಲ್ಲಿ ಗುರುವಾರ ಪ್ರಬಲ ಭೂಕಂಪ ಸಂಭವಿಸಿದ್ದು, ಇಬ್ಬರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಭೂಕಂಪದ ತೀವ್ರತೆ ರಿಕ್ಟರ್‌ ಮಾಪಕದಲ್ಲಿ 6.8ರಷ್ಟು ದಾಖಲಾಗಿದೆ. ಪೆಸಿಫಿಕ್‌ ಕರಾವಳಿಯ ಮೈಕೊವಾಕನ್‌ ರಾಜ್ಯದಲ್ಲಿ ಕಂಪನದ ಕೇಂದ್ರ ಬಿಂದುವನ್ನು ಗುರುತಿಸಲಾಗಿದೆ.

ಮೆಕ್ಸಿಕೊ ಸಿಟಿಯಲ್ಲಿ ಮಹಿಳೆಯೊಬ್ಬರು ಮನೆಯ ಮೆಟ್ಟಿಲುಗಳಿಂದ ಬಿದ್ದು ಹಾಗೂ ಇನ್ನೊಬ್ಬರು ಹೃದಯಾಘತದಿಂದ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಭಯಭೀತರಾದ ಜನರು ಮನೆಗಳಿಂದ ಹೊರಗೆ ಓಡಿ ಬಂದಿದ್ದಾರೆ. ಭೂಕಂಪದ ಪರಿಣಾಮ ಉರುವಾಪನ್‌ ನಗರದಲ್ಲಿ ಕಟ್ಟಡವೊಂದಕ್ಕೆ ಹಾನಿಯಾಗಿದೆ. ಹೆದ್ದಾರಿಯ ವಿವಿಧೆಡೆ ಭೂಕುಸಿತ ಸಂಭವಿಸಿದೆ ಎಂದಿದ್ದಾರೆ.

ಮೂರು ದಿನಗಳ ಹಿಂದೆ ಪಶ್ಚಿಮ ಮೆಕ್ಸಿಕೊದಲ್ಲಿ 7.6ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದ ಪರಿಣಾಮ ಇಬ್ಬರು ಸಾವನ್ನಪ್ಪಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.