ADVERTISEMENT

ಇಂಡೊನೇಷ್ಯಾ: 6.8 ತೀವ್ರತೆಯ ಭೂಕಂಪ

ಏಜೆನ್ಸೀಸ್
Published 6 ಮೇ 2020, 20:46 IST
Last Updated 6 ಮೇ 2020, 20:46 IST

ಜಕಾರ್ತ: ಪೂರ್ವ ಇಂಡೊನೇಷ್ಯಾದಲ್ಲಿ ಬುಧವಾರ ಸಂಜೆ ಭೂಕಂಪ ಉಂಟಾಗಿದ್ದು, ರಿಕ್ಟರ್‌ ಮಾಪಕದಲ್ಲಿ 6.8 ತೀವ್ರತೆ ದಾಖಲಾಗಿದೆ. ಆದರೆ ತಕ್ಷಣಕ್ಕೆ ಯಾವುದೇ ಹಾನಿ ಸಂಭವಿಸಿದ ವರದಿಯಾಗಿಲ್ಲ ಎಂದು ಅಮೆರಿಕದ ಭೌಗೋಳಿಕ ಸಮೀಕ್ಷೆ ತಿಳಿಸಿದೆ.

ಇಂಡೊನೇಷ್ಯಾದ ಮಲುಕು ಹಾಗೂ ಪೂರ್ವ ಟಿಮೊರ್‌ ನಡುವೆ ಇರುವ ಸಮುದ್ರದಲ್ಲಿ 107 ಕಿ.ಮೀ. ಆಳದಲ್ಲಿ ಭೂಕಂಪ ಉಂಟಾಗಿದೆ. ಆದರೆ ಸುನಾಮಿ ಎಚ್ಚರಿಕೆ ನೀಡಲಾಗಿಲ್ಲ. ಸುಮಾರು 390 ಕಿ.ಮೀ. ದೂರದ ಮಲುಕು ಪ್ರಾಂತದ ದ್ವೀಪಸಮೂಹ ಆಂಬನ್‌ನಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ.

ಇಂಡೊನೇಷ್ಯಾ ಜಗತ್ತಿನಲ್ಲಿ ಅತಿ ಹೆಚ್ಚು ನೈಸರ್ಗಿಕ ವಿಕೋಪಕ್ಕೆ ತುತ್ತಾಗುವ ದೇಶವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.