ADVERTISEMENT

ಪ್ಯಾರಿಸ್‌: ದುಷ್ಕರ್ಮಿಯಿಂದ ದಾಳಿ, ಚಾಕು ಇರಿತಕ್ಕೆ ಏಳು ಮಂದಿಗೆ ಗಾಯ

ಜನರನ್ನು ಗುರಿಯಾಗಿಸಿ ದಾಳಿ

ಏಜೆನ್ಸೀಸ್
Published 10 ಸೆಪ್ಟೆಂಬರ್ 2018, 11:22 IST
Last Updated 10 ಸೆಪ್ಟೆಂಬರ್ 2018, 11:22 IST
ದಾಳಿ ನಡೆದ ಸ್ಥಳದಲ್ಲಿ ಪೊಲೀಸರು ತಪಾಸಣೆ ನಡೆಸಿದರು –ಎಎಫ್‌ಪಿ ಚಿತ್ರ
ದಾಳಿ ನಡೆದ ಸ್ಥಳದಲ್ಲಿ ಪೊಲೀಸರು ತಪಾಸಣೆ ನಡೆಸಿದರು –ಎಎಫ್‌ಪಿ ಚಿತ್ರ   

ಪ್ಯಾರಿಸ್‌: ಇಲ್ಲಿನ ಕಾಲುವೆಯೊಂದರ ಬಳಿ ದುಷ್ಕರ್ಮಿಯೊಬ್ಬ ಚಾಕು ಹಾಗೂ ಕಬ್ಬಿಣದ ಸರಳಿನಿಂದ ಜನರ ಮೇಲೆ ದಾಳಿ ನಡೆಸಿದ್ದು, ಇಬ್ಬರು ಬ್ರಿಟಿಷ್‌ ಪ್ರವಾಸಿಗರು ಸೇರಿದಂತೆ ಏಳು ಮಂದಿ ಗಾಯಗೊಂಡಿದ್ದಾರೆ.

‘ಭಾನುವಾರ ರಾತ್ರಿ ದಾಳಿ ನಡೆದಿದೆ. ಗಾಯಾಳುಗಳ ಪೈಕಿ ನಾಲ್ವರು ತೀವ್ರ ಗಾಯಗೊಂಡಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.

ದಾಳಿಕೋರನನ್ನು ಬಂಧಿಸಲಾಗಿದ್ದು, ಆತ ಅಫ್ಗಾನಿಸ್ತಾನದ ಪ್ರಜೆ ಎಂದು ಪೊಲೀಸರು ಶಂಕಿಸಿದ್ದಾರೆ.

ADVERTISEMENT

ಇದು ಭಯೋತ್ಪಾದಕ ದಾಳಿ ಎಂಬುದಾಗಿ ಈಗಲೇ ಹೇಳಲಾಗದು ಎಂದು ಪೊಲೀಸರು ತಿಳಿಸಿದ್ದಾರೆ.

‘ಉಕ್ಕಿನ ಚೆಂಡುಗಳನ್ನು ಎಸೆಯುವ ಮೂಲಕ ಜನರು ದುಷ್ಕರ್ಮಿಯನ್ನು ತಡೆಯಲು ಯತ್ನಿಸಿದ್ದಾರೆ. ಆದರೂ ಆತ ದಾಳಿ ಮುಂದುವರಿಸಿದ್ದ’ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.

ಬಾಸ್ಸಿನ್‌ ಡಿ ಲಾ ವಿಲ್ಲೆಟ್ಟೆ ಸರೋವರದ ಸಮೀಪ ದಾಳಿ ನಡೆದಿದ್ದು, ಇಲ್ಲಿನ ಕೆಫೆ ಹಾಗೂ ಸಿನಿಮಾ ಮಂದಿರಗಳಿಗೆ ಸ್ಥಳೀಯರು ಹಾಗೂ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.