ADVERTISEMENT

ಇಬ್ಬರು ಭಾರತೀಯರಿಗೆ ದುಬೈನ ಗೋಲ್ಡ್‌ ಕಾರ್ಡ್‌

​ಪ್ರಜಾವಾಣಿ ವಾರ್ತೆ
Published 9 ಜುಲೈ 2019, 17:55 IST
Last Updated 9 ಜುಲೈ 2019, 17:55 IST

ದುಬೈ: ಶಾರ್ಜಾದಲ್ಲಿ ವಾಸವಿರುವ ಭಾರತದ ಉದ್ಯಮಿ ಲಾಲೊ ಸ್ಯಾಮುಯೆಲ್‌ ಅವರಿಗೆಅರಬ್‌ ಸಂಯುಕ್ತ ಒಕ್ಕೂಟದಶಾಶ್ವತ ನಿವಾಸಿ ಆಗುವ ಅವಕಾಶ ಒದಗಿದೆ.

ಇದೇ ಮೊದಲ ಬಾರಿಗೆ ವಿದೇಶಿಯೊಬ್ಬರಿಗೆ ಅರಬ್‌ ರಾಷ್ಟ್ರದಗೋಲ್ಡ್‌ ಕಾರ್ಡ್‌ ನೀಡಲಾಗಿದೆ.

ಕಿಂಗ್‌ಸ್ಟಾನ್‌ ಗ್ರೂಪ್‌ನ ಮುಖ್ಯಸ್ಥ ಲಾಲೊ ಅವರಿಗೆ ಶಾರ್ಜಾದ ವಸತಿ ಹಾಗೂ ವಿದೇಶಿ ವ್ಯವಹಾರಗಳ ಮಹಾನಿರ್ದೇಶಕ ಬ್ರಿಗೇಡರ್‌ ಆರಿಫ್‌ ಅಲ್‌ ಶಾಮಿ ಅವರು ಗೋಲ್ಡ್‌ ಕಾರ್ಡ್‌ ನೀಡಿದರು ಎಂದು ಗಲ್ಫ್‌ ನ್ಯೂಸ್‌ ಸೋಮವಾರ ವರದಿ ಮಾಡಿದೆ.

ADVERTISEMENT

ಇದರ ಬೆನ್ನಲ್ಲೇ, ಮಲಬಾರ್‌ ಆಭರಣ ಮಳಿಗೆಯ ಸಹ ಅಧ್ಯಕ್ಷ ಹಾಗೂ ಪೇಸ್‌ ಗ್ರೂಪ್‌ನ ಅಧ್ಯಕ್ಷ ಕೇರಳದ ಡಾ. ಪಿ.ಆರ್‌ ಇಬ್ರಾಹಿಂ ಹಾಜಿ ಅವರಿಗೂ ಸೋಮವಾರ ಗೋಲ್ಡ್‌ ಕಾರ್ಡ್‌ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.