ADVERTISEMENT

ಮಾಜಿ ಪ್ರೇಮಿಯ ಕೊಂದು ಅಡುಗೆ ಮಾಡಿ ಬಡಿಸಿದ ಮಹಿಳೆ!

ಏಜೆನ್ಸೀಸ್
Published 22 ನವೆಂಬರ್ 2018, 6:09 IST
Last Updated 22 ನವೆಂಬರ್ 2018, 6:09 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಅಬುಧಾಬಿ: ಮಹಿಳೆಯೊಬ್ಬಳುತನ್ನಮಾಜಿ ಪ್ರೇಮಿಯನ್ನು ಕೊಂದು, ದೇಹದ ಭಾಗಗಳನ್ನು ಕತ್ತರಿಸಿ ಅಡುಗೆ ಮಾಡಿ ಪಾಕಿಸ್ತಾನದ ಕಟ್ಟಡ ಕಾರ್ಮಿಕರಿಗೆ ಬಡಿಸಿದ ಅಮಾನುಷ ಘಟನೆ ಇಲ್ಲಿ ನಡೆದಿದ್ದು, ತಡವಾಗಿ ಗೊತ್ತಾಗಿದೆ.

ಆಫ್ರಿಕಾದ ಮೊರಾಕ್ಕೊ ಮಹಿಳೆ ಈ ದುಷ್ಕೃತ್ಯ ಎಸಗಿದ್ದು, ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.

ಮೃತನ ಸಹೋದರ ಇವರಿಬ್ಬರು ತಂಗಿದ್ದ ಮನೆಯಲ್ಲಿ ಹುಡುಕಾಟ ಆರಂಭಿಸಿದ್ದಾನೆ. ಆಗ ರುಬ್ಬುವ ಯಂತ್ರದಲ್ಲಿ ಆತನ ಹಲ್ಲುಗಳು ಇರುವುದನ್ನು ಗುರುತಿಸಿದ್ದಾನೆ. ಆಗ ಈ ಪ್ರಕರಣ ಬೆಳಕಿಗೆ ಬಂದಿದೆ.

ADVERTISEMENT

‘ಮಹಿಳೆಯ ಪ್ರೇಮಿಯು ಮೊರಕ್ಕೋದ (ದಕ್ಷಿಣ ಆಫ್ರಿಕಾ) ಮತ್ತೊಬ್ಬ ಯುವತಿಯನ್ನು ಮದುವೆಯಾಗಲು ಯೋಚಿಸಿದ್ದನು. ಆದ ಕಾರಣ ಈಕೆ ಆತನನ್ನು ಕೊಂದು ಹಾಕಿದ್ದಾಳೆ. ಈಕೆ ಆತನನ್ನು 7 ವರ್ಷಗಳಿಂದ ಪ್ರೀತಿಸುತ್ತಿದ್ದಳು’ ಎಂದು ಅಬುಧಾಬಿ ಪತ್ರಿಕೆ ವರದಿ ಮಾಡಿದೆ.

ಇನ್ನು, ‘ಈಕೆ ಆತನನ್ನು ಕತ್ತರಿಸಿ ಮ್ಯಾಕ್ಬೊಸ್ (ಅನ್ನ ಮತ್ತು ಮಾಂಸ ಮಿಶ್ರಿತ ಆಹಾರ) ಎಂಬ ಖಾದ್ಯ ಮಾಡಿ ಕಾರ್ಮಿಕರಿಗೆ ಬಡಿಸಿದ್ದಾಳೆ. ನಂತರ ದೇಹದ ಉಳಿದ ಅವಶೇಷಗಳನ್ನು ಪಕ್ಕದ ಮನೆಯ ನಾಯಿಗಳಿಗೆ ಹಾಕಿದ್ದಾಳೆ ’ಎಂದು ಖಾಜಿಲ್ ಟೈಮ್ಸ್ ವರದಿಯಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.