ADVERTISEMENT

ದಾಖಲೆಯ ಮೊತ್ತದ ಜಾಹೀರಾತು

ಅಮೆರಿಕದ ಅಧ್ಯಕ್ಷೀಯ ಚುನಾವಣೆ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2019, 20:00 IST
Last Updated 23 ನವೆಂಬರ್ 2019, 20:00 IST
ಮೈಕಲ್‌ ಬ್ಲೂಮ್‌ಬರ್ಗ್‌
ಮೈಕಲ್‌ ಬ್ಲೂಮ್‌ಬರ್ಗ್‌   

ವಾಷಿಂಗ್ಟನ್‌ (ಎಎಫ್‌ಪಿ): ಅಮೆರಿಕ ಅಧ್ಯಕ್ಷೀಯ ಚುನಾವಣೆ ರಂಗೇರುತ್ತಿದ್ದು, ನ್ಯೂಯಾರ್ಕ್ ಮಾಜಿ ಮೇಯರ್‌ ಮೈಕಲ್‌ ಬ್ಲೂಮ್‌ಬರ್ಗ್‌
ದಾಖಲೆಯ ₹222.55 ಕೋಟಿ ಮೊತ್ತದ ಟೆಲಿವಿಷನ್‌ ಜಾಹೀರಾತು ನೀಡಲು ಉದ್ದೇಶಿಸಿದ್ದಾರೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ಟೆಲಿವಿಷನ್‌ ಜಾಹೀರಾತಿಗೆ ಇದುವರೆಗೆ ಇಷ್ಟೊಂದು ಅಪಾರ ಮೊತ್ತವನ್ನು ವೆಚ್ಚ ಮಾಡಿಲ್ಲ ಎಂದು ಹೇಳಲಾಗಿದೆ.2012ರಲ್ಲಿ ಬರಾಕ್‌ ಒಬಾಮ ಅವರು ಚುನಾವಣೆ ಪ್ರಚಾರಕ್ಕೆ (₹ 180 ಕೋಟಿ) ವೆಚ್ಚ ಮಾಡಿದ್ದರು ಎಂದು ವರದಿಯಾಗಿತ್ತು.

ಮೈಕಲ್‌ ಅವರ ನಿರ್ಧಾರಕ್ಕೆ ವ್ಯಾಪಕ ಟೀಕೆಗಳು ಸಹ ವ್ಯಕ್ತವಾಗಿವೆ.‘ಇದು ಪ್ರಜಾಪ್ರಭುತ್ವ ವಿರೋಧಿ. ಮೈಕಲ್‌ ಬ್ಲೂಮಬರ್ಗ್‌ ಅಥವಾ ಯಾವುದೇ ಕೋಟ್ಯಧೀಶ ಕೋಟ್ಯಂತರ ರೂಪಾಯಿ ವೆಚ್ಚ ಮಾಡಿ ಚುನಾವಣೆಯನ್ನೇ ಖರೀದಿಸುವ ಹುನ್ನಾರ ನಡೆಸಿದ್ದಾರೆ. ಇದು ರಾಜಕೀಯ ವ್ಯವಸ್ಥೆಯನ್ನು ಬುಡಮೇಲು ಮಾಡುವ ಷಡ್ಯಂತ್ರ’ ಎಂದು ಸೆನೆಟರ್‌ ಬರ್ನಿ ಸ್ಯಾಂಡರ್ಸ್‌ ಟೀಕಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.