ನವದೆಹಲಿ: ಅಫ್ಗಾನಿಸ್ತಾನದಲ್ಲಿ ಒಂದೇ ದಿನ 4ಕ್ಕಿಂತ ಹೆಚ್ಚು ತೀವ್ರತೆಯ ಎರಡು ಭೂಕಂಪಗಳು ಸಂಭವಿಸಿವೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಹೇಳಿದೆ.
ಭಾರತೀಯ ಕಾಲಮಾನ ಬೆಳಿಗ್ಗೆ 4.51ಕ್ಕೆ ಮೊದಲ ಭೂಕಂಪನ ಸಂಭವಿಸಿದ್ದು, ಅದರ ತೀವ್ರತೆ 4.3ರಷ್ಟಿತ್ತು. 5.16ಕ್ಕೆ ನಡೆದ ಎರಡನೇ ಭೂಕಂಪದ ತೀವ್ರತೆ 4.7ರಷ್ಟಿತ್ತು ಎಂದು ಅದು ಮಾಹಿತಿ ನೀಡಿದೆ.
ಅಫ್ಗಾನ್ ರಾಜಧಾನಿ ಕಾಬೂಲ್‌ನಿಂದ 280 ಕಿ.ಮೀ ದೂರದಲ್ಲಿ ಈ ಎರಡೂ ಭೂಕಂಪಗಳ ಕೇಂದ್ರ ಬಿಂದು ಇತ್ತು. ಭೂಕಂಪನದ ಆಳ 180 ಕಿ.ಮೀ ಇತ್ತು ಎಂದು ಅದು ಮಾಹಿತಿ ನೀಡಿದೆ.
ಮ್ಯಾನ್ಮಾರ್‌ನಲ್ಲಿ ಪ್ರಬಲವಾದ ಎರಡು ಭೂಕಂಪನಗಳು ಸಂಭವಿಸಿ, ಭಾರಿ ಹಾನಿಯಾದ ಮರುದಿನವೇ ಅಫ್ಗಾನಿಸ್ತಾನದಲ್ಲಿ ಭೂಕಂಪ ಉಂಟಾಗಿದೆ.
ಬ್ಯಾಂಕಾಕ್‌ನಲ್ಲೂ ಕಂಪನ ಉಂಟಾಗಿ, ನಿರ್ಮಾಣ ಹಂತದಲ್ಲಿದ್ದ 30 ಅಂತಸ್ತಿನ ಕಟ್ಟಡ ಧರೆಗುರುಳಿತ್ತು. ಹಲವು ಕಟ್ಟಡಗಳು ನಡುಗಿದ್ದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.