
ಸಾಂದರ್ಭಿಕ ಚಿತ್ರ
ಲಂಡನ್: ಭಾರತದ ಗ್ರಾಮೀಣ ಭಾಗದ ಹದಿಹರಯದ ಹುಡುಗಿಯರಿಗಾಗಿ ಕೃತಕ ಬುದ್ಧಿಮತ್ತೆ (ಎಐ) ಬಳಕೆ ಮಾಡಿಕೊಳ್ಳುವ 5.3 ಮಿಲಿಯನ್ ಪೌಂಡ್ (ಸುಮಾರು ₹65.08 ಕೋಟಿ) ಮೊತ್ತದ ಡಿಜಿಟಲ್ ಮಾನಸಿಕ ಆರೋಗ್ಯ ಯೋಜನೆಯೊಂದನ್ನು ರೂಪಿಸಲು ಭಾರತ ಮತ್ತು ಬ್ರಿಟನ್‌ನ ಸಂಶೋಧಕರು ಮುಂದಾಗಿದ್ದಾರೆ.
ನವದೆಹಲಿಯಲ್ಲಿ ನಡೆಯುತ್ತಿರುವ ಎಐ ಶೃಂಗದಲ್ಲಿ ಈ ಯೋಜನೆಯನ್ನು ಘೋಷಿಸಲಾಗುತ್ತಿದೆ. ಲಂಡನ್‌ನ ಇಂಪೀರಿಯಲ್ ಕಾಲೇಜು, ಕೇಂಬ್ರಿಡ್ಜ್ ವಿಶ್ವವಿದ್ಯಾಲಯ, ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಷಿಯಲ್ ಸೈನ್ಸಸ್ ಮತ್ತು ಮಿಲಾನಾ ಫೌಂಡೇಷನ್ ಈ ಯೋಜನೆಯಲ್ಲಿ ಕೆಲಸ ಮಾಡಲಿವೆ. ಇವುಗಳ ಜೊತೆಯಲ್ಲಿ ಕೆಲವು ಸ್ಥಳೀಯ ಸಂಸ್ಥೆಗಳೂ ಕೆಲಸ ಮಾಡಲಿವೆ.
‘ಖಿನ್ನತೆಗೆ ಒಳಗಾದ ಗ್ರಾಮೀಣ ಭಾಗದ ಹುಡುಗಿಯರಿಗಾಗಿ ಎಐ ಚಾಟ್‌ಬೋಟ್ ಅನ್ನು ರೂಪಿಸಲಾಗುವುದು. ಚಾಟ್‌ಬೋಟ್ ಅಭಿವೃದ್ಧಿಗಾಗಿ ಎಲ್ಲರು ತಂಡವು ಕೆಲಸ ಮಾಡಲಿದೆ. ಈ ಚಾಟ್‌ಬೋಟ್ ಎಲ್ಲ ಮಾಹಿತಿಗಳನ್ನು ಒಳಗೊಂಡ, ಸ್ಥಳೀಯ ಭಾಷೆ–ಸಂಸ್ಕೃತಿಗೂ ಉತ್ತರಿಸಬಲ್ಲದಾಗಿರುತ್ತದೆ’ ಎಂದು ಇಂಪೀರಿಯಲ್ ಕಾಲೇಜಿನ ಪ್ರೊಫೆಸರ್ ಒಬ್ಬರು ಮಾಹಿತಿ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.