ADVERTISEMENT

ಕೋವಿಡ್‌ ಆತಂಕ, ರಜಾದಿನಗಳಲ್ಲಿ ಪ್ರಯಾಣಿಕರ ಒತ್ತಡ; ವಿಮಾನಯಾನ ಸಂಸ್ಥೆಗಳ ಪರದಾಟ

ಏಜೆನ್ಸೀಸ್
Published 3 ಆಗಸ್ಟ್ 2021, 7:21 IST
Last Updated 3 ಆಗಸ್ಟ್ 2021, 7:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಡಲ್ಲಾಸ್ (ಅಮೆರಿಕ): ಅಮೆರಿಕದಲ್ಲಿ ಕೋವಿಡ್‌ ‍ಪಿಡುಗಿನ ನಡುವೆಯೂ ವಿಮಾನ ಪ್ರಯಾಣವು ಗರಿಷ್ಠ ಮಟ್ಟವನ್ನು ತಲುಪಿದೆ. ವಿಮಾನಯಾನ ಸಂಸ್ಥೆಗಳು ಬೇಸಿಗೆ ರಜಾದಿನಗಳ ಜನಸಂದಣಿಯನ್ನು ನಿಯಂತ್ರಿಸಲು ಹರಸಾಹಸ ಪಡುತ್ತಿವೆ.

‘ಅಮೆರಿಕದಲ್ಲಿ ಡೆಲ್ಟಾ ರೂಪಾಂತರ ತಳಿಯಿಂದ ಕೋವಿಡ್‌ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದರೂ, ಬೇಸಿಗೆ ರಜಾದಿನಗಳಲ್ಲಿ ಬಹುತೇಕ ಜನರು ಪ್ರಯಾಣಿಸುತ್ತಿದ್ದಾರೆ. ಭಾನುವಾರದ ವೇಳೆಗೆ ಸುಮಾರು 22 ಲಕ್ಷ ಜನರು ವಿಮಾನದ ಮೂಲಕ ಪ್ರಯಾಣಿಸಿದ್ದಾರೆ’ ಎಂದು ಟ್ರಾನ್ಸ್‌ಪೋರ್ಟೇಶನ್‌ ಸೆಕ್ಯೂರಿಟಿ ಆಡ್ಮಿನಿಸ್ಟ್ರೇಷನ್‌ ತಿಳಿಸಿದೆ.

ಈಗಾಗಲೇ ಕೋವಿಡ್‌ ಸಾಂಕ್ರಾಮಿಕದಿಂದ ಸಂಕಷ್ಟಕ್ಕೆ ಸಿಲುಕಿರುವ ವಿಮಾನಯಾನ ಸಂಸ್ಥೆಗಳು, ಕೆಟ್ಟ ಹವಾಮಾನದಿಂದಾಗಿ ಹಲವು ವಿಮಾನಗಳನ್ನು ರದ್ದುಗೊಳಿಸಿವೆ. ಇದರಿಂದಾಗಿ ಜನಸಂದಣಿಯನ್ನು ನಿಯಂತ್ರಿಸಲು ಸಂಸ್ಥೆಗಳು ಪರದಾಡುತ್ತಿವೆ.

ADVERTISEMENT

ಕೋವಿಡ್‌ ಪಿಡುಗಿನ ಬಳಿಕ ಬಹುತೇಕ ವಿಮಾನಯಾನ ಸಂಸ್ಥೆಗಳು ಸಿಬ್ಬಂದಿ ಸಂಖ್ಯೆಯನ್ನು ಕಡಿತಗೊಳಿಸಿವೆ. ಈಗ ಏಕಾಏಕಿ ಪ್ರಯಾಣಿಕರ ಸಂಖ್ಯೆ ಹೆಚ್ಚಳವಾದ್ದರಿಂದ, ಸಿಬ್ಬಂದಿ ಕೊರತೆಯೂ ದೊಡ್ಡ ತಲೆನೋವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.