ADVERTISEMENT

ಉಕ್ರೇನ್‌ ಮೇಲಿನ ಅತಿಕ್ರಮಣಕ್ಕೆ ಅಮೆರಿಕವನ್ನು ದೂಷಿಸಿದ ಅಲ್ ಖೈದಾ: ಕಾರಣವೇನು?

ಏಜೆನ್ಸೀಸ್
Published 7 ಮೇ 2022, 14:35 IST
Last Updated 7 ಮೇ 2022, 14:35 IST
ಅಯ್ಮನ್‌ ಅಲ್‌ ಜವಾಹಿರಿ - ಎಪಿ ಚಿತ್ರ
ಅಯ್ಮನ್‌ ಅಲ್‌ ಜವಾಹಿರಿ - ಎಪಿ ಚಿತ್ರ   

ಬಾಗ್ದಾದ್: ಉಕ್ರೇನ್ ಮೇಲಿನ ರಷ್ಯಾ ಅತಿಕ್ರಮಣಕ್ಕೆ ಅಲ್‌ ಖೈದಾ ಮುಖ್ಯಸ್ಥ ಅಯ್ಮನ್‌ ಅಲ್‌ ಜವಾಹಿರಿ ಅಮೆರಿಕವನ್ನು ದೂಷಿಸಿದ್ದಾನೆ.

ಒಸಾಮಾ ಬಿನ್ ಲಾಡೆನ್‌ ಸ್ಮರಣೆ ಕಾರ್ಯಕ್ರಮದ ಸಂದರ್ಭದಲ್ಲಿ ಶುಕ್ರವಾರ, ಜವಾಹಿರಿ ಮಾತನಾಡಿರುವ ರೆಕಾರ್ಡೆಡ್ ವಿಡಿಯೊವನ್ನು ಬಿಡುಗಡೆ ಮಾಡಲಾಗಿದೆ.

ಅಮೆರಿಕದ ದುರ್ಬಲತೆಯೇ ಅದರ ಮಿತ್ರ ರಾಷ್ಟ್ರ ಉಕ್ರೇನ್ ಮೇಲೆ ರಷ್ಯಾ ದಾಳಿ ನಡೆಸಲು ಕಾರಣ ಎಂದು ಜವಾಹಿರಿ ಹೇಳಿದ್ದಾನೆ.

ADVERTISEMENT

ಮುಸ್ಲಿಮರು ಒಗ್ಗಟ್ಟಾಗಬೇಕು ಎಂದು ಒತ್ತಾಯಿಸಿರುವ ಜವಾಹಿರಿ, ಅಮೆರಿಕವು ದುರ್ಬಲವಾಗಿದೆ ಎಂದು ಹೇಳಿದ್ದಾನೆ. ಜತೆಗೆ, 9/11 ಭಯೋತ್ಪಾದಕ ದಾಳಿಯ ಬಳಿಕ ಇರಾಕ್ ಮತ್ತು ಅಫ್ಗಾನಿಸ್ತಾನಗಳಲ್ಲಿ ನಡೆದ ಯುದ್ಧದ ಪರಿಣಾಮಗಳನ್ನು ಉಲ್ಲೇಖಿಸಿದ್ದಾನೆ.

‘9/11ರ ದಾಳಿ, ಇರಾಕ್ ಮತ್ತು ಅಫ್ಗಾನಿಸ್ತಾನದಲ್ಲಿ ಸೋಲಿನ ನಂತರದ ಹಣಕಾಸು ವಿಪತ್ತುಗಳು, ಕೋವಿಡ್ ಸಾಂಕ್ರಾಮಿಕದ ಬಳಿಕ ಅಮೆರಿಕ ಈ ಸ್ಥಿತಿಗೆ ತಲುಪಿದೆ. ತನ್ನ ಮಿತ್ರರಾಷ್ಟ್ರವಾದ ಉಕ್ರೇನ್ ಅನ್ನು ರಷ್ಯನ್ನರಿಗೆ ಬೇಟೆಯಾಗಿ ಬಿಟ್ಟುಕೊಟ್ಟಿದೆ’ ಎಂದು ಜವಾಹಿರಿ ಹೇಳಿದ್ದಾನೆ.

ಅಲ್‌ ಜವಾಹಿರಿ ಎಲ್ಲಿದ್ದಾನೆ ಎಂಬ ಮಾಹಿತಿ ಇನ್ನೂ ನಿಗೂಢವಾಗಿಯೇ ಇದೆ. ಆತನ ಬಗ್ಗೆ ಸುಳಿವು ನೀಡಿದವರಿಗೆ ಅಮೆರಿಕದ ಎಫ್‌ಬಿಐ ₹2.5 ಕೋಟಿ ಡಾಲರ್ ಬಹುಮಾನ ಘೋಷಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.