ADVERTISEMENT

ಎಲ್ಲ ದೇಶಗಳೂ ತಾಲಿಬಾನ್‌ಗೆ ಸಕ್ರಿಯ ಮಾರ್ಗದರ್ಶನ ನೀಡಬೇಕು: ಚೀನಾ

ಪಿಟಿಐ
Published 30 ಆಗಸ್ಟ್ 2021, 11:22 IST
Last Updated 30 ಆಗಸ್ಟ್ 2021, 11:22 IST
ಚೀನಾ ವಿದೇಶಾಂಗ ಸಚಿವ ವಾಂಗ್ ಯಿ
ಚೀನಾ ವಿದೇಶಾಂಗ ಸಚಿವ ವಾಂಗ್ ಯಿ   

ಬೀಜಿಂಗ್: ಪ್ರಸ್ತುತ ಅಫ್ಗಾನಿಸ್ತಾನದಲ್ಲಿ ಪರಿಸ್ಥಿತಿ ಬದಲಾಗಿದ್ದು, ವಿಶ್ವದ ಎಲ್ಲ ರಾಷ್ಟ್ರಗಳು ತಾಲಿಬಾನ್‌ಗಳೊಂದಿಗೆ ಸಂಪರ್ಕ ಸಾಧಿಸಿ, ಸಕ್ರಿಯವಾಗಿ ಮಾರ್ಗದರ್ಶನ ನೀಡುವುದು ಅಗತ್ಯವಾಗಿದೆ ಎಂದು ಚೀನಾ ಅಮೆರಿಕಕ್ಕೆ ತಿಳಿಸಿದೆ.

ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಅವರು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟೊನಿ ಬ್ಲಿಂಕನ್ ಅವರೊಂದಿಗೆ ಭಾನುವಾರ ದೂರವಾಣಿಯಲ್ಲಿ ಮಾತನಾಡುವ ವೇಳೆ, ಈ ವಿಷಯವನ್ನು ಚರ್ಚಿಸಿದರು ಎಂದು ಸರ್ಕಾರಿ ಸ್ವಾಮ್ಯದ ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಇದೇ ವೇಳೆಅಮೆರಿಕ ತನ್ನ ಸೇನೆಯನ್ನು ಅಫ್ಗಾನಿಸ್ತಾನದಿಂದ ವಾಪಸ್ ಕರೆಸಿಕೊಳ್ಳುತ್ತಿರುವುದು, ಅಲ್ಲಿ ಭಯೋತ್ಪಾದಕ ಗುಂಪುಗಳ ಪುನರುತ್ಥಾನಗೊಳ್ಳುವ ಹೆಚ್ಚಲು ಕಾರಣವಾಗಬಹುದು ಎಂಬುದನ್ನು ವಾಂಗ್‌ ಒತ್ತಿ ಹೇಳಿದರು.

ADVERTISEMENT

ಆ. 31ರೊಳಗೆ ಅಫ್ಗನ್ ನಾಗರಿಕರು ಮತ್ತು ಅಮೆರಿಕ ಹಾಗೂ ನ್ಯಾಟೊ ರಾಷ್ಟ್ರಗಳ ರಾಜತಾಂತ್ರಿಕರನ್ನು ತೆರವುಗೊಳಿಸುತ್ತಿರುವ ಸಂದರ್ಭದಲ್ಲಿ ಅಫ್ಗಾನಿಸ್ತಾನದಲ್ಲಿನ ಪರಿಸ್ಥಿತಿ ಹೇಗಿದೆ ಎಂದು ಉಭಯ ರಾಷ್ಟ್ರಗಳ ನಾಯಕರು ಚರ್ಚಿಸಿದರು. ನಂತರ ಉಭಯ ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಒಪ್ಪಂದಗಳ ಕುರಿತು ಚರ್ಚಿಸಿದರು.

ಅಫ್ಗಾನಿಸ್ತಾನಕ್ಕೆ ತುರ್ತಾಗಿ ಅಗತ್ಯವಿರುವ ಆರ್ಥಿಕ, ಜೀವನೋಪಾಯ ಮತ್ತು ಮಾನವೀಯ ನೆರವು ಒದಗಿಸುವುದು, ವಿಶೇಷವಾಗಿ ಅಲ್ಲಿನ ಸರ್ಕಾರಿ ಇಲಾಖೆಗಳ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಹೊಸ ಸರ್ಕಾರ ರಚನೆಗೆ ಸಹಾಯ ಮಾಡುವುದು, ಸಾಮಾಜಿಕ ಭದ್ರತೆ ಮತ್ತು ಸ್ಥಿರತೆಯನ್ನು ಕಾಪಾಡುವುದು, ಕರಗುತ್ತಿರುವ ಕರೆನ್ಸಿ ಮೌಲ್ಯವನ್ನು ತಡೆಯಲು ಅಮೆರಿಕ ನೆರವು ನೀಡಬೇಕಿದೆ ಎಂದು ವಾಂಗ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.