ADVERTISEMENT

ವಿಚ್ಛೇದನ: ₹ 2.64 ಲಕ್ಷ ಕೋಟಿ ಪರಿಹಾರ ಪಡೆದ ಜೆಫ್‌ ಪತ್ನಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2019, 20:00 IST
Last Updated 6 ಜುಲೈ 2019, 20:00 IST
ಜೆಫ್‌ ಬಿಜೋಸ್ ಮತ್ತು ಮೆಕೆಂಜಿ 
ಜೆಫ್‌ ಬಿಜೋಸ್ ಮತ್ತು ಮೆಕೆಂಜಿ    

ವಾಷಿಂಗ್ಟನ್‌: ಅಮೆಜಾನ್‌ ಕಂಪನಿ ಸ್ಥಾಪಕ ಜೆಫ್ ಬಿಜೋಸ್ ಅವರ ಪತ್ನಿ ಮೆಕೆಂಜಿ ಬಿಜೋಸ್‌ ವಿಚ್ಛೇದನ ಪರಿಹಾರವಾಗಿ ₹ 2.64 ಲಕ್ಷ ಕೋಟಿ ಪಡೆಯಲಿದ್ದಾರೆ ಎಂದು ಬ್ಲೂಂಬರ್ಗ್‌ ವರದಿ ಮಾಡಿದೆ.

ಏಪ್ರಿಲ್‌ನಲ್ಲಿ ವಿಚ್ಛೇದನ ಪಡೆದ ಮೆಕೆಂಜಿ ಅವರಿಗೆಕಂಪನಿ 1.97 ಕೋಟಿ ಷೇರುಗಳನ್ನು ನೀಡಿತ್ತು. ಜೆಫ್‌ ಅವರು ಕಂಪನಿಯಲ್ಲಿ ಶೇ 12ರಷ್ಟು ಷೇರುಗಳನ್ನು ಹೊಂದಿದ್ದು, ವಿಶ್ವದ ಮೊದಲ ಶ್ರೀಮಂತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT