ADVERTISEMENT

ಅಮೆರಿಕ: ಮಾಸ್ಕ್‌ ಧರಿಸಲು ನಿರಾಕರಿಸಿದ ಮಹಿಳೆ ವಿರುದ್ಧ ಬಂಧನ ವಾರಂಟ್‌ ಜಾರಿ

ಏಜೆನ್ಸೀಸ್
Published 15 ಮಾರ್ಚ್ 2021, 7:16 IST
Last Updated 15 ಮಾರ್ಚ್ 2021, 7:16 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಗಾಲ್ವೆಸ್ಟನ್ (ಅಮೆರಿಕ): ಟೆಕ್ಸಾಸ್‌ನ ಬ್ಯಾಂಕಿನಲ್ಲಿ ಮಾಸ್ಕ್‌ ಹಾಕಲು ನಿರಾಕರಿಸಿದ ಮಹಿಳೆಯೊಬ್ಬರ ವಿರುದ್ಧ ಪೊಲೀಸರು ಬಂಧನ ವಾರಂಟ್‌ ಜಾರಿ ಮಾಡಿದ್ದಾರೆ.

ಗುರುವಾರ ಗಾಲ್ವೆಸ್ಟನ್‌ನ ಬ್ಯಾಂಕ್‌ ಆಫ್‌ ಅಮೆರಿಕದಲ್ಲಿ ಮಹಿಳೆಯೊಬ್ಬರಿಗೆ ಮಾಸ್ಕ್‌ ಧರಿಸುವಂತೆ ಪೊಲೀಸರು ಸೂಚಿಸಿದ್ದಾರೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿದ ಮಹಿಳೆ,‘ ಮಾಸ್ಕ್‌ ಧರಿಸದಿದ್ದರೆ ಏನು ಮಾಡುತ್ತೀರಿ? ಬಂಧಿಸುತ್ತೀರಾ? ಎಂದು ಸವಾಲೆಸೆದಿದ್ದಾರೆ.

ಈ ಸಂಬಂಧ ಒರೆಗಾನ್‌ನ ಗ್ಯ್ರಾಟ್‌ ಪಾಸ್‌ ನಿವಾಸಿ ಟೆರಿ ರೈಟ್‌ ವಿರುದ್ಧ ಬಂಧನದ ವಾರಂಟ್‌ ಜಾರಿ ಮಾಡಲಾಗಿದೆ. ಈ ಘಟನೆಯು ಪೊಲೀಸರ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಬ್ಯಾಂಕ್‌ನ ವ್ಯವಸ್ಥಾ‍ಪಕ, ಮಹಿಳೆಗೆ ಮಾಸ್ಕ್‌ ಧರಿಸುವಂತೆ ಹೇಳಲು ಪೊಲೀಸರಿಗೆ ಸೂಚಿಸಿದ್ದರು.

ADVERTISEMENT

ಪೊಲೀಸರು ಕ್ಯಾಮೆರಾದಲ್ಲಿ ಸೆರೆಯಾಗಿರುವ ವಿಡಿಯೊ ದೃಶ್ಯಾವಳಿಯನ್ನು ಬಿಡುಗಡೆಗೊಳಿಸಿದ್ದಾರೆ. ಈ ವಿಡಿಯೊದಲ್ಲಿ ಟೆರಿ ರೈಟ್‌ ಅವರು ಬ್ಯಾಂಕಿನ ಲಾಬಿಯಲ್ಲಿ ಮಾಸ್ಕ್‌ ಧರಿಸದೆ ನಿಂತಿರುವುದು ಕಾಣಬಹುದು. ಇದೇ ವೇಳೆ ಅವರ ಪಕ್ಕದಲ್ಲಿ ಇದ್ದ ಇತರೆ ಗ್ರಾಹಕರು ಮಾಸ್ಕ್‌ ಧರಿಸಿರುವುದು ವಿಡಿಯೊದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ.

‘ಪೊಲೀಸರು ಆಕೆಯನ್ನು ಬಂಧಿಸಲು ಬಂದಾಗ ಟೆರಿ ಬ್ಯಾಂಕಿನ ಹೊರಗಡೆ ನಡೆದರು. ಅವರನ್ನು ಪೊಲೀಸರು ತಡೆದರು. ಈ ವೇಳೆ ಪೊಲೀಸರು ಮತ್ತು ಟೆರಿ ನಡುವೆ ಸಣ್ಣ ವಾಗ್ವಾದ ಘರ್ಷಣೆ ನಡೆದಿದೆ.ಟೆರಿಗೆ ಸಣ್ಣ–ಪುಟ್ಟ ಗಾಯಗಳಾಗಿತ್ತು. ಹಾಗಾಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು’ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.