ADVERTISEMENT

ಅಮೆರಿಕದಲ್ಲಿ ಕೊರೊನಾ ಸಾವಿನ ಬಗ್ಗೆ ಟ್ರಂಪ್ ಟ್ವೀಟ್: ಮಿಶ್ರ ಪ್ರತಿಕ್ರಿಯೆ

ಏಜೆನ್ಸೀಸ್
Published 8 ಜುಲೈ 2020, 7:24 IST
Last Updated 8 ಜುಲೈ 2020, 7:24 IST
ಅಮೆರಿಕಾದಲ್ಲಿ ಕೊರೊನಾ
ಅಮೆರಿಕಾದಲ್ಲಿ ಕೊರೊನಾ   

ವಾಷಿಂಗ್ಟನ್(ಅಮೆರಿಕ): ಅಮೆರಿಕದಲ್ಲಿ ಕೊರೊನಾ ಸೋಂಕಿನಿಂದ ಸಾಯುವವರ ಸಂಖ್ಯೆ ಹತ್ತುಪಟ್ಟು ಕಡಿಮೆಯಾಗಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಟ್ವೀಟ್ ಮಾಡಿದ್ದಾರೆ.

ಈ ಟ್ವೀಟ್ ಗೆ ಹಲವರು ವಿರೋಧ ವ್ಯಕ್ತಪಡಿಸಿದ್ದರೆ, ಮತ್ತೆ ಕೆಲವರು ಇದು ಸುಳ್ಳು ಅಮೆರಿಕ ವಿಶ್ವದಲ್ಲಿಯೇ ಅತ್ಯಂತ ಸಾವು ಸಂಭವಿಸಿರುವ ರಾಷ್ಟ್ರವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.

ಕೊರೊನಾ ಸೋಂಕಿನ ನಿಯಂತ್ರಣಕ್ಕಾಗಿ ಎಲ್ಲಾ ಪ್ರಯತ್ನಗಳನ್ನು ನಡೆಸುತ್ತಿರುವ ಅಮೆರಿಕ ಸಾಧ್ಯವಿರುವ ರಾಷ್ಟ್ರಗಳಿಂದ ಅಗತ್ಯ ಔಷಧಗಳನ್ನು ಅಮದುಮಾಡಿಕೊಂಡಿದೆ. ಆದರೂ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ.

ADVERTISEMENT

ಅಮೆರಿಕದಲ್ಲಿ ಒಟ್ಟು 30 ಲಕ್ಷ ಪ್ರಕರಣಗಳು ವರದಿಯಾಗಿವೆ. ಈ ಸೋಂಕಿನಿಂದ ಸಾವಿನ ಸಂಖ್ಯೆ 1.33 ಲಕ್ಷಕ್ಕೆ ಏರಿಕೆಯಾಗಿದೆ. 13 ಲಕ್ಷ ಮಂದಿ ಈ ರೋಗದಿಂದ ಗುಣಮುಖರಾಗಿದ್ದಾರೆ. ಇನ್ನೂ 16 ಲಕ್ಷ ಪ್ರಕರಣಗಳು ಈ ದೇಶದಲ್ಲಿ ಸಕ್ರಿಯವಾಗಿವೆ. 15 ಸಾವಿರ ಪ್ರಕರಣಗಳು ಗಂಭೀರ ಸ್ಥಿತಿಯಲ್ಲಿವೆ.

ನ್ಯೂಯಾರ್ಕ್ ನಲ್ಲಿ ಅತ್ಯಂತ ಹೆಚ್ಚು ಪ್ರಕರಣಗಳು ವರದಿಯಾಗಿವೆ. 4.23 ಲಕ್ಷ ಪ್ರಕರಣಗಳು ವರದಿಯಾಗಿದ್ದರೆ, 32 ಸಾವಿರ ಮಂದಿ ಇಲ್ಲಿ ಸಾವನ್ನಪ್ಪಿದ್ದಾರೆ. ಇನ್ನೂ 2.61 ಲಕ್ಷ ಪ್ರಕರಣಗಳು ಇಲ್ಲಿ ಸಕ್ರಿಯವಾಗಿವೆ. ಕ್ಯಾಲಿಫೋರ್ನಿಯಾದಲ್ಲಿ 2.87 ಲಕ್ಷ ಪ್ರಕರಣಗಳು ವರದಿಯಾಗಿದ್ದು, ಇಲ್ಲಿ 6,563 ಮಂದಿ ಸಾವನ್ನಪ್ಪಿದ್ದಾರೆ. ಇನ್ನೂ 2 03ಲಕ್ಷ ಪ್ರಕರಣಗಳು ಇಲ್ಲಿ ಸಕ್ರಿಯವಾಗಿವೆ. ಟೆಕ್ಸಾಸ್ ನಲ್ಲಿ 2.19 ಲಕ್ಷ ಪ್ರಕರಣಗಳು ವರದಿಯಾಗಿದ್ದು, 2,823 ಮಂದಿ ಸಾವನ್ನಪ್ಪಿದ್ದಾರೆ. ಇಲ್ಲಿ 10 ಲಕ್ಷ ಪ್ರಕರಣಗಳು ಸಕ್ರಿಯವಾಗಿವೆ. ಫ್ಲೋರಿಡಾದಲ್ಲಿ 2 .13 ಲಕ್ಷ ಪ್ರಕರಣಗಳು ವರದಿಯಾಗಿದ್ದು, 3,841 ಮಂದಿ ಮೃತಪಟ್ಟಿದ್ದಾರೆ. 1.18 ಲಕ್ಷ ಪ್ರಕರಣಗಳು ಸಕ್ರಿಯವಾಗಿವೆ. ಅಮೆರಿಕಾದ ಹಲವು ರಾಜ್ಯಗಳಲ್ಲಿ ಸೋಂಕು ಕಾಣಿಸಿಕೊಳ್ಳುತ್ತಲೇ ಇವೆ.

ಅಮೆರಿಕದಲ್ಲಿ ಕಳೆದ ಜನವರಿಯಲ್ಲಿ ಸೋಂಕು ಕಾಣಿಸಿಕೊಂಡಿತ್ತು. ಆದರೆ, ಸಾವು ಸಂಭವಿಸಿರಲಿಲ್ಲ. ಫೆಬ್ರವರಿ 27ರಂದು ಈ ಸೋಂಕಿಗೆ ಮೊದಲ ಬಲಿಯಾಯಿತು. ಮಾರ್ಚ್ ತಿಂಗಳ ಅಂತ್ಯಕ್ಕೆ ಸಾವಿನ ಸಂಖ್ಯೆ 2779ಕ್ಕೆ ಏರಿಕೆಯಾಯಿತು. ಕೇವಲ ಒಂದು ತಿಂಗಳಲ್ಲಿ 2779 ಮಂದಿ ಸಾವನ್ನಪ್ಪಿದರು. ನಂತರ ಏಪ್ರಿಲ್ ಅಂತ್ಯದ ವೇಳೆಗೆ ಸಾವಿನ ಸಂಖ್ಯೆ 65 ಸಾವಿರಕ್ಕೆ ಏರಿಕೆಯಾಯಿತು.

ಮೇ ತಿಂಗಳ ಅಂತ್ಯಕ್ಕೆ ಸಾವಿನ ಸಂಖ್ಯೆ 1.8 ಲಕ್ಷ ಮಂದಿ ಸಾವನ್ನಪ್ಪಿದರು. ಜೂನ್ ಅಂತ್ಯದ ವೇಳೆಗೆ ಸಾವಿನ ಸಂಖ್ಯೆ 1.30 ಲಕ್ಷಕ್ಕೆ ಏರಿಕೆಯಾಯಿತು. ಜುಲೈ ಮೊದಲವಾರದಲ್ಲಿ ಸಾವಿನ ಸಂಖ್ಯೆ 132,601ಕ್ಕೆ ಏರಿಕೆಯಾಗಿದೆ. ಇಲ್ಲಿ ಟ್ರಂಪ್ ಟ್ವೀಟ್ ಮಾಡಿರುವಂತೆ ಹತ್ತು ಪಟ್ಟು ಕಡಿಮೆಯಾಗಿದೆ ಎನ್ನುವುದಕ್ಕೂ ಅಲ್ಲಿ ಸಂಭವಿಸುತ್ತಿರುವ ಸಾವಿನ ಸಂಖ್ಯೆಗೂ ತಾಳೆಯಾಗುತ್ತಿಲ್ಲ. ಮಾರ್ಚ್ ತಿಂಗಳಲ್ಲಿ ಸಾವನ್ನಪ್ಪುವವರ ಸಂಖ್ಯೆ ಪ್ರತಿದಿನ 2ರಿಂದ 10ಕ್ಕೆ ಏರಿಕೆಯಾದರೆ, ಮಾರ್ಚ್ 29ರಲ್ಲಿ ಒಂದೇ ದಿನ 501 ಮಂದಿ ಮೃತಪಟ್ಟರು.
ಜೂನ್ 30ರಂದು ಒಂದೇ ದಿನ 727 ಮಂದಿ ಮೃತಪಟ್ಟಿದ್ದಾರೆ. ಜುಲೈ 7ರಂದು ಒಂದೇ ದಿನ 993 ಮಂದಿ ಮೃತಪಟ್ಟಿದ್ದಾರೆ.

ಡೊನಾಲ್ಡ್ ಟ್ರಂಪ್ ಜುಲೈ 8ರಂದು ಮಾಡಿರುವ ಈ ಟ್ವೀಟ್‌ಗೆ 28 ಸಾವಿರ ರಿಟ್ವೀಟ್ ಮಾಡಿದ್ದು, 1.30 ಕೋಟಿ ಮಂದಿ ಲೈಕ್ ಮಾಡಿದ್ದಾರೆ. ಹಲವರು ಈ ಹೇಳಿಕೆ ಸುಳ್ಳು, ಅಮೆರಿಕಾ ವಿಶ್ವದಲ್ಲಿಯೇ ಅತ್ಯಂತ ಸಾವು ಸಂಭವಿಸುತ್ತಿರುವ ರಾಷ್ಟ್ರವಾಗಿದೆ ಎಂದು ಉತ್ತರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.