ADVERTISEMENT

ಅಮೆರಿಕ–ಮೆಕ್ಸಿಕೊ ಗಡಿಯಲ್ಲಿ ‘ಟಕ್ಕಾ–ಟಿಕ್ಕಿ’

​ಪ್ರಜಾವಾಣಿ ವಾರ್ತೆ
Published 31 ಜುಲೈ 2019, 18:46 IST
Last Updated 31 ಜುಲೈ 2019, 18:46 IST
ಅಮೆರಿಕ–ಮೆಕ್ಸಿಕೊ ಗಡಿಯಲ್ಲಿ ಅಳವಡಿಸಿರುವ ಟಕ್ಕಾ–ಟಿಕ್ಕಿಯಲ್ಲಿ ಆಟವಾಡುತ್ತಿರುವ ಮಕ್ಕಳು, ಹಿರಿಯರು -ಎಎಫ್‌ಪಿ ಚಿತ್ರ
ಅಮೆರಿಕ–ಮೆಕ್ಸಿಕೊ ಗಡಿಯಲ್ಲಿ ಅಳವಡಿಸಿರುವ ಟಕ್ಕಾ–ಟಿಕ್ಕಿಯಲ್ಲಿ ಆಟವಾಡುತ್ತಿರುವ ಮಕ್ಕಳು, ಹಿರಿಯರು -ಎಎಫ್‌ಪಿ ಚಿತ್ರ   

ಲಾಸ್‌ ಏಂಜಲೀಸ್‌:ಅಮೆರಿಕ– ಮೆಕ್ಸಿಕೊ 2,000 ಕಿ.ಮೀ. ಉದ್ದದ ಗಡಿಗೆ ತಡೆಗೋಡೆ ನಿರ್ಮಿಸುವ ಡೊನಾಲ್ಡ್‌ ಟ್ರಂಪ್‌ ಯೋಜನೆಯನ್ನು, ಕ್ಯಾಲಿಫೋರ್ನಿಯಾದ ಇಬ್ಬರು ಪ್ರಾಧ್ಯಾಪಕರು ವಿನೂತನವಾಗಿ ವಿರೋಧಿಸಿದ್ದಾರೆ.

ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದ ವಾಸ್ತುಶಿಲ್ಪ ಪ್ರಾಧ್ಯಾಪಕ ರೊನಾಲ್ಡ್‌ ರಯೀಲ್‌ ಹಾಗೂ ಸ್ಯಾನ್‌ ಜೋಸ್‌ ವಿಶ್ವವಿದ್ಯಾಲಯದ ವರ್ಜೀನಿಯಾ ಸ್ಯಾನ್‌ ಫ್ರಟೆಲ್ಲೋ ಜಂಟಿಯಾಗಿನ್ಯೂ ಮೆಕ್ಸಿಕೋ ಮತ್ತು ಮೆಕ್ಸಿಕೋಗಡಿಯಲ್ಲಿ ಮೂರು ಗುಲಾಬಿ ಬಣ್ಣದಟಕ್ಕಾ–ಟಿಕ್ಕಿಗಳನ್ನು(ಸೀಸಾ) ಅಳವಡಿಸಿದ್ದು, ಆಕರ್ಷಣೆಯ ಕೇಂದ್ರವಾಗಿದೆ.

‘ಟಕ್ಕಾ–ಟಿಕ್ಕಿ ಅಳವಡಿಸುವ ಮೂಲಕ, ಒಂದು ಭಾಗದಲ್ಲಿ ಸಮತೋಲನ ಇಲ್ಲವಾದರೆ ಇದರ ನೇರ ಪ್ರಭಾವ ಮತ್ತೊಂದೆಡೆ ಕಾಣಿಸುತ್ತದೆ ಎನ್ನುವ ಸಂದೇಶವನ್ನು ಈ ಮೂಲಕ ನೀಡಲು ಯತ್ನಿಸಿದ್ದೇವೆ’ ಎಂದು ರೊನಾಲ್ಡ್‌ ತಿಳಿಸಿದರು.

ADVERTISEMENT

ಈ ಚಿಂತನೆಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗಿದ್ದು, ಟಕ್ಕಾ–ಟಿಕ್ಕಿಯಲ್ಲಿ ಮಕ್ಕಳು, ಹಿರಿಯರು ಆಡುತ್ತಿರುವ ದೃಶ್ಯಾವಳಿಗಳು ಹರಿದಾಡುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.