ADVERTISEMENT

ಸಮಾಧಿಯಲ್ಲಿ 3,000 ವರ್ಷಗಳ ಹಿಂದಿನ ಖಡ್ಗ ಪತ್ತೆ: ಇನ್ನೂ ಫಳಫಳನೇ ಹೊಳೆಯುತ್ತಿದೆಯಂತೆ!

ಜರ್ಮನಿಯ ದಕ್ಷಿಣದ ನಾರ್ಡ್‌ಲಿಂಗೆನ್‌ ಎಂಬ ಪಟ್ಟಣದ ಬಳಿ ಪತ್ತೆ

ಐಎಎನ್ಎಸ್
Published 17 ಜೂನ್ 2023, 7:34 IST
Last Updated 17 ಜೂನ್ 2023, 7:34 IST
ಪತ್ತೆಯಾಗಿರುವ ಖಡ್ಗ
ಪತ್ತೆಯಾಗಿರುವ ಖಡ್ಗ   

ಬರ್ಲಿನ್: ಜರ್ಮನಿಯ ಸಮಾಧಿಯೊಂದರಲ್ಲಿ ಬರೋಬ್ಬರಿ 3,000 ವರ್ಷಗಳ ಹಿಂದಿನ ಖಡ್ಗ ದೊರಕಿರುವ ಸಂಗತಿ ಬೆಳಕಿಗೆ ಬಂದಿದೆ.

ಜರ್ಮನಿಯ ದಕ್ಷಿಣದ ನಾರ್ಡ್‌ಲಿಂಗೆನ್‌ ಎಂಬ ಪಟ್ಟಣದ ಬಳಿ ಪತ್ತೆಯಾಗಿರುವ ಈ ಖಡ್ಗ ಅತ್ಯಂತ ಸುಸ್ಥಿತಿಯಲ್ಲಿತ್ತು ಹಾಗೂ ಹಿತ್ತಾಳೆ ಯುಗದ್ದು ಎಂದು ಪುರಾತತ್ವಶಾಸ್ತ್ರಜ್ಞರು ತಿಳಿಸಿರುವುದಾಗಿ ಬಿಬಿಸಿ ಮಾಹಿತಿ ಆಧರಿಸಿ ಸುದ್ದಿಸಂಸ್ಥೆ ಐಎಎನ್‌ಎಸ್ ವರದಿ ಮಾಡಿದೆ.

‘ಉತ್ಖನನ ನಡೆಸುವ ಸಂದರ್ಭದಲ್ಲಿ ಸಿಕ್ಕಿರುವ ಈ ಖಡ್ಗ, ಕ್ರಿ.ಪೂ 14 ನೇ ಶತಮಾನಕ್ಕೆ ಸೇರಿದೆ. ಇನ್ನೂ ಫಳಫಳನೆ ಹೊಳೆಯುತ್ತಿದೆ’ ಎಂದು ಜರ್ಮನಿಯ ಪ್ರಾಚೀನ ಸ್ಮಾರಕ ಸಂರಕ್ಷಣಾ ಕೇಂದ್ರವಾಗಿರುವ ಬವಾರಿಯಾಸ್ ಸ್ಟೇಟ್ ಆಫೀಸ್‌ ತಿಳಿಸಿದೆ.

ADVERTISEMENT

‘ಸಮಾಧಿಯಲ್ಲಿ ಪುರುಷ, ಮಹಿಳೆ ಹಾಗೂ ಮಕ್ಕಳ ಅಸ್ಥಿಪಂಜರಗಳು ದೊರಕಿವೆ. ಅವುಗಳ ಜೊತೆ ಖಡ್ಗ ಸಿಕ್ಕಿದೆ. ಈ ಬಗ್ಗೆ ಅಧ್ಯಯನ ನಡೆಸಲಾಗುವುದು’ ಎಂದು ಹೇಳಿದೆ.

‘ಈ ಖಡ್ಗ ನೋಡಿದರೆ ತುಂಬಾ ಆಶ್ಚರ್ಯವಾಗುತ್ತಿದೆ, ಏಕೆಂದರೆ, ಈ ಆಧುನಿಕ ಕಾಲದಲ್ಲಿಯೂ ಇಷ್ಟೊಂದು ಗಟ್ಟಿಯಾದ ಹಾಗೂ ಅತ್ಯಂತ ನಿಖರವಾದ ಖಡ್ಗ ಸಿಗುವುದು ಅಪರೂಪ. ಇದನ್ನು ಆಯುಧವಾಗಿ ಬಳಸುತ್ತಿದ್ದರು’ ಎಂದು ಪ್ರಾಥಮಿಕವಾಗಿ ತಿಳಿದು ಬಂದಿದೆ ಎಂದು ಬವಾರಿಯಾಸ್ ಸ್ಟೇಟ್ ಆಫೀಸ್‌ ಮುಖ್ಯಸ್ಥ ಮ್ಯಾಥೂಸ್ ಪಿಫೇಯಿಲ್ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.