ADVERTISEMENT

ನೆದರ್ಲೆಂಡ್ಸ್‌ನಲ್ಲಿ ಪ್ರಾಣಿಗಳಿಗೂ ಕೊರೊನಾ ವೈರಸ್ ಸೋಂಕು

​ಪ್ರಜಾವಾಣಿ ವಾರ್ತೆ
Published 27 ಏಪ್ರಿಲ್ 2020, 2:11 IST
Last Updated 27 ಏಪ್ರಿಲ್ 2020, 2:11 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹೇಗ್: ನೆದರ್ಲೆಂಡ್ಸ್‌ನ ಉತ್ತರ ಬ್ರಬಾಂಟ್‌ನ ಎರಡು ಮಿಂಕ್ (ಮುಂಗುಸಿಯನ್ನು ಹೋಲುವ ಪ್ರಾಣಿ) ಫಾರ್ಮ್‌ಗಳ ಪ್ರಾಣಿಗಳಲ್ಲಿ ಕೊರೊನಾ ವೈರಸ್ ಸೋಂಕು ಪತ್ತೆಯಾಗಿದೆ.

ಈ ಫಾರ್ಮ್‌ಗಳಲ್ಲಿ ಕೆಲಸ ಮಾಡುತ್ತಿದ್ದ ಕೆಲವು ಸಿಬ್ಬಂದಿಯಲ್ಲಿ ಈ ಹಿಂದೆ ಕೊರೊನಾ ಲಕ್ಷಣ ಕಾಣಿಸಿಕೊಂಡಿತ್ತು. ಹೀಗಾಗಿ ಅವರಿಂದ ಪ್ರಾಣಿಗಳಿಗೆ ಹರಡಿರಬಹುದು. ಮುನ್ನೆಚ್ಚರಿಕಾ ಕ್ರಮವಾಗಿ ಫಾರ್ಮ್‌ಗಳ ಸುತ್ತಲಿನ 400 ಮೀಟರ್ ವರೆಗಿನ ರಸ್ತೆಯನ್ನು ಬಂದ್ ಮಾಡಲಾಗಿದೆ ಎಂದು ಅಲ್ಲಿನ ಕೃಷಿ ಸಚಿವಾಲಯ ತಿಳಿಸಿದೆ.

ನೆದರ್ಲೆಂಡ್ಸ್‌ನಲ್ಲಿ ಅತಿಹೆಚ್ಚು ಕೊರೊನಾ ಪ್ರಕರಣ ಕಂಡುಬಂದ ಪ್ರದೇಶವಾಗಿದೆ ಬ್ರಬಾಂಟ್‌.

ADVERTISEMENT

ಪ್ರಾಣಿಗಳಿಗೆ ಕೊರೊನಾ ಸೋಂಕು ತಗುಲಿರುವುದು ಇದೇ ಮೊದಲಲ್ಲ. ನ್ಯೂಯಾರ್ಕ್ ನಗರದ ಬ್ರಾಂಕ್ಸ್ ಮೃಗಾಲಯದಲ್ಲಿರುವ ಹುಲಿಯೊಂದಕ್ಕೆ ಕೋವಿಡ್–19 ತಗುಲಿರುವುದು ಏಪ್ರಿಲ್ ಆರಂಭದಲ್ಲಿ ವರದಿಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.