ADVERTISEMENT

ಕಾಳಿ ಮಾತೆ ಪೋಸ್ಟರ್‌ ವಿವಾದ: ಕೆನಡಾದ ಕನ್ನಡಿಗ ಸಂಸದ ಚಂದ್ರ ಆರ್ಯ ಬೇಸರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 6 ಜುಲೈ 2022, 7:42 IST
Last Updated 6 ಜುಲೈ 2022, 7:42 IST
ಸಂಸದ ಚಂದ್ರ ಆರ್ಯ
ಸಂಸದ ಚಂದ್ರ ಆರ್ಯ   

ನವದೆಹಲಿ: ನಟಿ, ನಿರ್ದೇಶಕಿ ಲೀನಾ ಮಣಿಮೇಕಲೈ ಚಿತ್ರಿಸಿರುವ ವಿವಾದಾತ್ಮಕ ‘ಕಾಳಿ‘ ದೇವತೆ ಪೋಸ್ಟರ್​ ಬಗ್ಗೆ ಕೆನಡಾದ ಕನ್ನಡಿಗ ಸಂಸದ ಬೇಸರ ವ್ಯಕ್ತಪಡಿಸಿದ್ದಾರೆ.

ಕೆನಡಾ ಸಂಸದರಾಗಿರುವ ಕರ್ನಾಟಕ ಮೂಲದ ಚಂದ್ರ ಆರ್ಯ ಅವರು ಲೀನಾ ಮಣಿಮೇಕಲೈ ಚಿತ್ರಿಸಿರುವ ವಿವಾದಾತ್ಮಕ ‘ಕಾಳಿ‘ ದೇವತೆ ಪೋಸ್ಟರ್​ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಹಾಗೇ ಆಗಾ ಮ್ಯೂಸಿಯಂಕ್ಷಮೆ ಕೇಳಿದ್ದು ಸ್ವಾಗತಾರ್ಹ ಮತ್ತು ಮೆಚ್ಚುಗೆಗೆ ಅರ್ಹ ಎಂದಿದ್ದಾರೆ.

ಚಿತ್ರ ನಿರ್ಮಾಪಕಿ, ನಿರ್ದೇಶಕಿ, ನಟಿ ಲೀನಾ ಮಣಿಮೇಕಲೈ ಅವರ ಕಾಳಿ ಪೋಸ್ಟರ್ ನೋಡಿ ತುಂಬಾ ನೋವಾಗಿದೆ. ಕೆನಡಾದಲ್ಲಿ ಹಲವು ವರ್ಷಗಳಿಂದ ಹಿಂದೂ ವಿರೋಧಿ ಹಾಗೂ ಭಾರತ ವಿರೋಧಿ ಗುಂಪುಗಳು ಜತೆಗೂಡಿ ಮಾಧ್ಯಮಗಳಲ್ಲಿ ಹಿಂದೂ ಫೋಬಿಕ್ ಲೇಖನಗಳು ಮತ್ತು ದೇವಾಲಯಗಳ ಮೇಲೆ ದಾಳಿ ನಡೆಸುತ್ತಿವೆ. ಅಲ್ಲದೇ, ಈ ವಿವಾದ ಕುರಿತಂತೆ ಅಗಾಖಾನ್​​ ಮ್ಯೂಸಿಯಂ ಕ್ಷಮೆ ಕೇಳಿದ್ದು ಸ್ವಾಗತಾರ್ಹ ಮತ್ತು ಮೆಚ್ಚುಗೆಗೆ ಅರ್ಹ ಎಂದು ಟ್ವೀಟ್‌ ಮಾಡಿದ್ದಾರೆ.

ಲೀನಾ ‘ಕಾಳಿ‘ ಎಂಬ ಸಾಕ್ಷ್ಯಚಿತ್ರ ನಿರ್ಮಾಣ ಮಾಡಿದ್ದಾರೆ. ಇದಕ್ಕೆ ಸಂಬಂಧಿಸಿದ ಪೋಸ್ಟರ್‌ ಹಂಚಿಕೊಂಡಿದ್ದು ಅದರಲ್ಲಿ ಹಿಂದೂ ದೇವತೆ ಕಾಳಿ ಮಾತೆಯು ಸಿಗರೇಟ್ ಸೇದುತ್ತಿರುವ ಹಾಗೂ ಕೈಯಲ್ಲಿ ಎಲ್‌ಜಿಬಿಟಿಕ್ಯೂ(LGBTQ) ಸಮುದಾಯದ ಧ್ವಜವನ್ನು ಹಿಡಿದಿರುವ ಅವತಾರದಲ್ಲಿ ತೋರಿಸಲಾಗಿದೆ.

ಈ ಪೋಸ್ಟರ್‌ ಹಾಗೂ ಲೀನಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.ವಿವಾದಿತ ಪೋಸ್ಟರ್‌ ಬಗ್ಗೆಅಗಾ ಖಾನ್​ ಮ್ಯೂಸಿಯಂ ಕ್ಷಮೆ ಯಾಚಿಸಿ ಟ್ವೀಟ್‌ ಮಾಡಿದೆ.

ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.