ADVERTISEMENT

ಇಮ್ರಾನ್‌ ಖಾನ್‌ರನ್ನು ಟೀಕಿಸಿದ ವಿಡಿಯೊ ಪಾಕ್‌ ರಾಯಭಾರ ಕಚೇರಿಯಿಂದಲೇ ಶೇರ್‌!

ಐಎಎನ್ಎಸ್
Published 3 ಡಿಸೆಂಬರ್ 2021, 12:15 IST
Last Updated 3 ಡಿಸೆಂಬರ್ 2021, 12:15 IST
ಇಮ್ರಾನ್‌ ಖಾನ್‌
ಇಮ್ರಾನ್‌ ಖಾನ್‌   

ಇಸ್ಲಾಮಾಬಾದ್‌: ಹೆಚ್ಚುತ್ತಿರುವ ಹಣದುಬ್ಬರ, ಸರ್ಕಾರ ಸಂಬಳ ಪಾವತಿಸದ ಆರೋಪದ ಕುರಿತು ಪಾಕಿಸ್ತಾನ ಸರ್ಕಾರ ಮತ್ತು ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಟೀಕಿಸಿದ 56 ಸೆಕೆಂಡ್‌ಗಳ ವಿಡಿಯೊವನ್ನು ಸರ್ಬಿಯಾದಲ್ಲಿರುವ ಪಾಕಿಸ್ತಾನದ ರಾಯಭಾರಿ ಕಚೇರಿಯ ಅಧಿಕೃತ ಟ್ವಿಟರ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಗಳ ಮೂಲಕ ಶೇರ್‌ ಮಾಡಲಾಗಿದೆ.

ಸದ್ಯ ವೈರಲ್‌ ಆಗಿರುವ ವಿಡಿಯೊ ಪಾಕಿಸ್ತಾನವನ್ನು ಮುಜುಗರಕ್ಕೆ ತಳ್ಳಿದೆ.

ಪ್ರಧಾನಮಂತ್ರಿ ಇಮ್ರಾನ್‌ ಖಾನ್‌ ಅವರ ಘೋಷವಾಕ್ಯವಾಗಿರುವ 'ಘಬ್ರಾನಾ ನಹೀ ಹೈ (ನಾವು ಚಿಂತಿಸಬೇಕಾಗಿಲ್ಲ) ಅನ್ನು ಬಳಸಿಕೊಂಡು ಸರ್ಕಾರ ಎಲ್ಲಿ ಎಡವಿದೆ ಎಂಬುದನ್ನು ವಿಡಿಯೊದಲ್ಲಿ ವಿಮರ್ಶೆ ಮಾಡಲಾಗಿದೆ.

ADVERTISEMENT

ಈ ವಿಡಿಯೊ ಶುಕ್ರವಾರ ಬೆಳಗ್ಗೆ ಶೇರ್‌ ಆಗಿದೆ. ಈ ಬಗ್ಗೆ ಸ್ಪಷ್ಟನೆ ನೀಡಿರುವ ಪಾಕಿಸ್ತಾನದ ವಿದೇಶಾಂಗ ಇಲಾಖೆ, ಸರ್ಬಿಯಾದಲ್ಲಿರುವ ರಾಯಭಾರ ಕಚೇರಿಯ ಸಾಮಾಜಿಕ ತಾಣಗಳ ಖಾತೆಗಳು ಹ್ಯಾಕ್‌ ಆಗಿದ್ದು, ಪೋಸ್ಟ್‌ಗಳನ್ನು ಈಗ ಅಳಿಸಲಾಗಿದೆ ಎಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.