ADVERTISEMENT

ಅಲ್ಪಸಂಖ್ಯಾತರ ರಕ್ಷಣೆಗೆ ಪಾಕಿಸ್ತಾನ ಬದ್ಧ : ಇಮ್ರಾನ್ ಖಾನ್‌

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2020, 13:29 IST
Last Updated 26 ಫೆಬ್ರುವರಿ 2020, 13:29 IST
   

ಬೆಂಗಳೂರು: ಪಾಕಿಸ್ತಾನದಲ್ಲಿನ ಅಲ್ಪಸಂಖ್ಯಾತರ ವಿರುದ್ಧಯಾರಾದರೂ ಅನ್ಯಾಯ, ಅಕ್ರಮಎಸೆಗಿದರೆಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪಾಕಿಸ್ತಾನದ ಪ್ರಧಾನ ಮಂತ್ರಿ ಇಮ್ರಾನ್‌ ಖಾನ್‌ ಹೇಳಿದ್ದಾರೆ. ಭಾರತದಲ್ಲಿ ನಡೆಯತ್ತಿರುವ ಹಿಂಸಾಚಾರವನ್ನು ಅವರು ಖಂಡಿಸಿದ್ದಾರೆ.

ದೆಹಲಿಯಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆಯ ಪರ ಮತ್ತು ವಿರುದ್ಧನಡೆಯತ್ತಿರುವ ಹಿಂಸಾಚಾರ ಕಳೆದ ಭಾನುವಾರದಿಂದ ತೀವ್ರಗೊಂಡಿದ್ದು ಒಟ್ಟು 22 ಜನರು ಮೃತಪಟ್ಟಿದ್ದಾರೆ.

ಪಾಕಿಸ್ತಾನದಲ್ಲಿಯಾರಾದರೂ ಇಲ್ಲಿನ ಮುಸ್ಲಿಮೇತರ ಸಮುದಾಯದ ಜನರು ಮತ್ತು ಅವರಅರಾಧನಾಲಯವನ್ನುಗುರಿಯಾಗಿಸಿದಾಳಿ ನಡೆಸಿದರೆ ಅವರಿಗೆ ಕಠಿಣ ಶಿಕ್ಷೆ ನೀಡಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.

ADVERTISEMENT

ಭಾರತದಲ್ಲಿ 20 ಕೋಟಿ ಮುಸ್ಲಿಮರನ್ನುಗುರಿಯಾಗಿಸಿದದಾಳಿನಡೆಯುತ್ತಿದೆ. ಇದನ್ನು ಅಂತರರಾಷ್ಟ್ರೀಯ ಸಮುದಾಯವು ತಡೆಯಬೇಕು ಎಂದು ಅವರು ಆಗ್ರಹಿಸಿದ್ದಾರೆ.

ದ್ವೇಷದಿಂದ ಕೂಡಿದಸಿದ್ಧಾಂತಗಳುಅಧಿಕಾರಕ್ಕೆಬಂದಾಗ, ರಕ್ತಪಾತ ಸಂಭವಿಸುತ್ತದೆಎಂದುಇಮ್ರಾನ್ಖಾನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.