ADVERTISEMENT

ಚೀನಾದ ಸರ್ವಾಧಿಕಾರ ನಡವಳಿಕೆ: ಅಮೆರಿಕ ಕಿಡಿ

ಭಾರತದ ಗಡಿಯಲ್ಲಿ ಹೆಚ್ಚಿದ ಚೀನಾ ಸೇನೆ: ಮೈಕ್‌ ಪಾಂಪಿಯೊ ಆಕ್ರೋಶ

ಪಿಟಿಐ
Published 3 ಜೂನ್ 2020, 2:29 IST
Last Updated 3 ಜೂನ್ 2020, 2:29 IST
ಮೈಕ್‌ ಪಾಂಪಿಯೊ
ಮೈಕ್‌ ಪಾಂಪಿಯೊ   

ವಾಷಿಂಗ್ಟನ್‌: ಭಾರತದ ಜತೆಗಿನ ಗಡಿ ವಿಷಯದಲ್ಲಿ ಚೀನಾದ ನಡವಳಿಕೆ ಬಗ್ಗೆ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್‌ ಪಾಂಪಿಯೊ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ವಾಸ್ತವ ನಿಯಂತ್ರಣ ರೇಖೆಯುದ್ದಕ್ಕೂ (ಎಲ್‌ಸಿಎ) ಚೀನಾ ಇಂದಿಗೂ ತನ್ನ ಸೇನಾ ಪಡೆಯನ್ನು ಹೆಚ್ಚಿಸುತ್ತಿದೆ. ಸರ್ವಾಧಿಕಾರಿ ಆಡಳಿತಗಳು ಮಾತ್ರ ಇಂತಹ ಕ್ರಮಗಳನ್ನು ಕೈಗೊಳ್ಳುತ್ತವೆ’ ಎಂದು ಕಿಡಿಕಾರಿದ್ದಾರೆ.

’ಭಾರತದ ಗಡಿ, ಹಾಂಗ್‌ಕಾಂಗ್‌ ಅಥವಾ ದಕ್ಷಿಣ ಚೀನಾ ವಿಷಯದಲ್ಲೂ ಇದೇ ರೀತಿ ಚೀನಾ ವರ್ತಿಸುತ್ತಿದೆ. ಈ ವಿಷಯಗಳಲ್ಲಿ ಆಡಳಿತಾರೂಢ ಕಮ್ಯುನಿಸ್ಟ್‌ ಪಕ್ಷದ ನಡವಳಿಕೆ ಯಾವ ರೀತಿ ಇದೆ ಎನ್ನುವುದನ್ನು ತೋರಿಸಿಕೊಟ್ಟಿದೆ’ ಎಂದು ಹೇಳಿದ್ದಾರೆ.

ADVERTISEMENT

‘ವುಹಾನ್‌ನಲ್ಲಿ ಮೊದಲು ಕಾಣಿಸಿಕೊಂಡ ಕೊರೊನಾ ವೈರಸ್‌ ಕುರಿತ ಮಾಹಿತಿಯನ್ನು ಚೀನಾ ಮುಚ್ಚಿಟ್ಟ ಪರಿಣಾಮ ಇಡೀ ಜಗತ್ತೇ ತತ್ತರಿಸಬೇಕಾಯಿತು. ಹಾಂಗ್‌ಕಾಂಗ್‌ಗೆ ಸಂಬಂಧಿಸಿದಂತೆ ವಿವಾದಿತ ಕಾನೂನು ರೂಪಿಸಿ ಅಲ್ಲಿನ ಜನರ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತಿದೆ. ಕೇವಲ ಈ ಎರಡು ಉದಾಹರಣೆಗಳು ಚೀನಾದ ಆಡಳಿತಾರೂಢ ಕಮ್ಯುನಿಸ್ಟ್‌ ಪಕ್ಷದ ನಡವಳಿಕೆ ಯಾವ ರೀತಿ ಎನ್ನುವುದನ್ನು ತೋರಿಸುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.