ADVERTISEMENT

ಲಕ್ಷಣರಹಿತ ಸೋಂಕಿತರಿಂದಲೂ ಗಮನಾರ್ಹ ಪ್ರಮಾಣದಲ್ಲಿ ಹರಡುತ್ತೆ ಕೊರೊನಾ: ಅಧ್ಯಯನ

ಏಜೆನ್ಸೀಸ್
Published 7 ಆಗಸ್ಟ್ 2020, 6:21 IST
Last Updated 7 ಆಗಸ್ಟ್ 2020, 6:21 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ವಾಷಿಂಗ್ಟನ್: ಕೊರೊನಾ ವೈರಸ್ ಸೋಂಕಿತರು ರೋಗ ಲಕ್ಷಣ ಹೊಂದಿರದಿದ್ದರೂ ಸೋಂಕು ಹರಡುವ ಸಾಧ್ಯತೆ ಗಮನಾರ್ಹ ಪ್ರಮಾಣದಲ್ಲಿದೆ. ಲಕ್ಷಣರಹಿತ ಸೋಂಕಿತರ ಮೂಗು, ಗಂಟಲು, ಶ್ವಾಸಕೋಶದಲ್ಲಿಯೂ ಲಕ್ಷಣಸಹಿತ ಸೋಂಕಿತರಲ್ಲಿರುವಷ್ಟೇ ಪ್ರಮಾಣದಲ್ಲಿವೈರಸ್ಇರುತ್ತದೆ ಎಂದು ದಕ್ಷಿಣ ಕೊರಿಯಾದ ಹೊಸ ಅಧ್ಯಯನ ವರದಿ ತಿಳಿಸಿದೆ. ‘ಜೆಎಎಂಎ ಇಂಟರ್ನಲ್ ಮೆಡಿಸಿನ್’ ಜರ್ನಲ್‌ನಲ್ಲಿ ವರದಿ ಪ್ರಕಟವಾಗಿದೆ.

ಸೂನ್‌ಚನ್‌ಹ್ಯಾಂಗ್ ವಿಶ್ವವಿದ್ಯಾಲಯದ ವೈದ್ಯಕೀಯ ಕಾಲೇಜಿನ ಸೆಯುಂಗ್ಜೆ ಲೀ ನೇತೃತ್ವದ ಸಂಶೋಧಕರ ತಂಡವು ಮಾರ್ಚ್‌6ರಿಂದ 26ರ ವರೆಗೆ ಸೋಂಕಿತರಾದ 303 ಮಂದಿಯ ಮಾದರಿಯನ್ನು ಅಧ್ಯಯನಕ್ಕೆ ಒಳಪಡಿಸಿ ವರದಿ ಸಿದ್ಧಪಡಿಸಿದೆ.

22ರಿಂದ 36 ವರ್ಷ ವವಯಸ್ಸಿನ ವರೆಗಿನವರ ಮಾದರಿಯನ್ನು ಅಧ್ಯಯನಕ್ಕೆ ತೆಗೆದುಕೊಳ್ಳಲಾಗಿತ್ತು. ಇದರಲ್ಲಿ ಮೂರನೇ ಎರಡರಷ್ಟು ಮಂದಿ ಮಹಿಳೆಯರಾಗಿದ್ದರು. 193 ಮಂದಿ ಸೋಂಕಿನ ಲಕ್ಷಣಗಳನ್ನು ಹೊಂದಿದ್ದರೆ 110 ಮಂದಿ ಲಕ್ಷಣರಹಿತ ಸೋಂಕಿತರಾಗಿದ್ದರು. ಈ ಪೈಕಿ ಆರಂಭದಲ್ಲೇ ಲಕ್ಷಣರಹಿತರಾಗಿದ್ದ 89 ಮಂದಿಯಲ್ಲಿ (ಶೇ 30ರಷ್ಟು) ಎಂದಿಗೂ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿರಲೇ ಇಲ್ಲ.

ADVERTISEMENT

ಆದರೆ, ಲಕ್ಷಣ ಹೊಂದಿರುವ ಸೋಂಕಿತರ ಜತೆ ಹೋಲಿಸಿದರೆ ಲಕ್ಷಣರಹಿತ ಸೋಂಕಿತರು ಬೇಗನೇ ಗುಣಮುಖರಾಗುತ್ತಾರೆ. ಇವರಿಗೆ 17 ದಿನಗಳಲ್ಲಿ ಕೊರೊನಾ ಪರೀಕ್ಷಾ ವರದಿ ನೆಗೆಟಿವ್ ಬಂದಿದ್ದರೆ, ಲಕ್ಷಣ ಹೊಂದಿರುವ ಸೋಂಕಿತರ ವರದಿ ನೆಗೆಟಿವ್ ಬರಲು 19.5 ದಿನ ಬೇಕಾಗಿತ್ತು ಎಂದೂ ವರದಿ ಉಲ್ಲೇಖಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.