ADVERTISEMENT

ಇಂಡೊನೇಷ್ಯಾ: ಸುಮಾತ್ರಾ ದ್ವೀಪದಲ್ಲಿ ಭಾರಿ ಮಳೆ –ಭೂಕುಸಿತ, 10 ಮಂದಿ ಸಾವು

ಏಜೆನ್ಸೀಸ್
Published 9 ಮಾರ್ಚ್ 2024, 14:06 IST
Last Updated 9 ಮಾರ್ಚ್ 2024, 14:06 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ಪಡಂಗ್, ಇಂಡೊನೇಷ್ಯಾ: ಧಾರಾಕಾರ ಮಳೆ ಮತ್ತು ಪ್ರವಾಹ ಪರಿಸ್ಥಿತಿಯಿಂದಾಗಿ ಇಂಡೊನೇಷ್ಯಾದ ಸುಮಾತ್ರಾ ದ್ವೀಪ ಭಾಗದಲ್ಲಿ ಭೂಕುಸಿತ ಸಂಭವಿಸಿದೆ. ಕನಿಷ್ಠ 10 ಜನ ಸತ್ತಿದ್ದು, 10 ಜನರು ನಾಪತ್ತೆಯಾಗಿದ್ದಾರೆ.

ಭೂಕುಸಿತದ ಪರಿಣಾಮ ಬಂಡೆಕಲ್ಲು ಉರುಳಿವೆ. ಹಲವು ಮರಗಳು ನೆಲಸಮವಾಗಿವೆ. ಪಶ್ಚಿಮ ಸುಮಾತ್ರಾ ಪ್ರಾಂತ್ಯದ ಹಲವು ಗ್ರಾಮಗಳು ಜಲಾವೃತಗೊಂಡಿವೆ ಎಂದು ಸ್ಥಳೀಯ ವಿಪತ್ತು ನಿರ್ವಹಣಾ ಸಂಸ್ಥೆಯ ಡೋನಿ ತಿಳಿಸಿದ್ದಾರೆ.

ADVERTISEMENT

ಸುಮಾರು 46 ಸಾವಿರ ಜನರು ಸಂತ್ರಸ್ತರಾಗಿದ್ದು, ನಿರಾಶ್ರಿತರ ಶಿಬಿರದಲ್ಲಿ ಆಸರೆ ಪಡೆದಿದ್ದಾರೆ. 14 ಮನೆಗಳು ಕುಸಿದಿವೆ. ಅಂದಾಜು 20 ಸಾವಿರ ಮನೆಗಳಿಗೆ ಹಾನಿಯಾಗಿದೆ ಎಂದು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.